ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಪಡೆಯ ಹೆಲಿಕಾಪ್ಟರ್ (Pakistani Army Helicopter) ಪತನಗೊಂಡು 6 ಮಂದಿ ಸೈನಿಕರು (Commandos) ಮೃತಪಟ್ಟಿರುವ ಘಟನೆ ಹರ್ನೈ ಬಲೂಚಿಸ್ತಾನದ ಖೋಸ್ಟ್ ಬಳಿ ನಡೆದಿದೆ ಎಂದು ವರದಿಯಾಗಿದೆ.
Advertisement
ಹರ್ನೈ (Harnai) ಬಲೂಚಿಸ್ತಾನದ (Balochistan) ಖೋಸ್ಟ್ (Khost) ಬಳಿ ಸೇನಾ ಕಾರ್ಯಚರಣೆ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್ ಸೇರಿ ಒಟ್ಟು 6 ಸೈನಿಕರು ದುರ್ಮರಣ ಹೊಂದಿದ್ದಾರೆ. ಇದನ್ನೂ ಓದಿ: ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು
Advertisement
Six Pakistani Army officials have been killed last night after their helicopter crashed during a flying mission near in Balochistan’s Harnai area. pic.twitter.com/LEY4nknxOZ
— Ehsanullah Ehsan???????? (@EhEhsanullah) September 26, 2022
Advertisement
6 ಸೈನಿಕರ ಪೈಕಿ ಇಬ್ಬರು ಉನ್ನತ ಶ್ರೇಣಿಯ ಸೇನಾ ಆಧಿಕಾರಿಗಳಾಗಿದ್ದು, ಇನ್ನುಳಿದ ಮೂವರು ಕಮಾಂಡೋಗಳಾಗಿದ್ದರು. ಕಳೆದ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಮಿಲಿಟರಿ ಹೆಲಿಕಾಪ್ಟರ್ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪತನಗೊಂಡಿತು. ಈ ವೇಳೆ ಸಾವನ್ನಪ್ಪಿದ ಆರು ಮಂದಿ ಉನ್ನತ ಶ್ರೇಣಿಯ ಕಮಾಂಡರ್‌ಗಳಾಗಿದ್ದರು. ಪಾಕಿಸ್ತಾನ ಸೇನೆಯ ಏವಿಯೇಷನ್ ಹೆಲಿಕಾಪ್ಟರ್ ಕಳೆದ ತಿಂಗಳು ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದಾಗ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಇದನ್ನೂ ಓದಿ: ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ
Advertisement
Live Tv
[brid partner=56869869 player=32851 video=960834 autoplay=true]