ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಘೋಷಣೆ (Pakistan Zindabad Slogan) ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ (FSL Report) ಇನ್ನೂ ಬಂದಿಲ್ಲ ವರದಿ ಇನ್ನೂ ವರದಿ ಬರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr Parmeshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ವರದಿ ಬಂದ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆದು ತನಿಖೆ ಮಾಡಿ ವಾಯ್ಸ್ ರೆಕಾರ್ಡ್ ಸಹಾ ಮಾಡಿದ್ದೇವೆ. ಧ್ವನಿ (Voice) ತಾಳೆಯಾಗಬೇಕು.ಒಂದು ವಾಹಿನಿಯದ್ದು ಅಲ್ಲ ಸಾಕಷ್ಟು ಕ್ಲಿಪ್ ಇದೆ. ಎಲ್ಲವನ್ನೂ ಪರೀಕ್ಷೆ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ: ತೇಜಸ್ವಿ ಸೂರ್ಯ ಅನುಮಾನ
Advertisement
Advertisement
ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿಯಲ್ಲಿ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ ಎಂದು ಸಿಎಂ ಹೇಳಿದ್ದಾರೆ. ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು ಎಂದು ಹೇಳಿದರು. ಇದನ್ನೂ ಓದಿ: ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!
Advertisement
ಜಾತಿ ಗಣತಿ ವರದಿಗೆ ಲಿಂಗಾಯತ, ಒಕ್ಕಲಿಗ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಸಂಖ್ಯೆ ಕಡಿಮೆ ಇರಬಹುದು ಎಂಬ ಆತಂಕ ಇರಬಹುದು. ಈಗ ನೀಡಿರುವ ವರದಿ ಆಯೋಗದ ವರದಿ ಅಂತ ರಿಪೋರ್ಟ್ ಅಂತ ಆಗುತ್ತದೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿ ಅಂತ ಬರುವುದಿಲ್ಲ ಎಂದಿದ್ದಾರೆ.
Advertisement