ಮುಂಬೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಡೆಸಿರುವ ಪ್ರತಿಭಟನೆ (Protest) ವೇಳೆ ಕೆಲ ಪ್ರತಿಭಟನಾಕಾರರು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಘೋಷಣೆಗಳನ್ನು ಕೂಗಿರುವ ಘಟನೆ ಶುಕ್ರವಾರ ಪುಣೆಯಲ್ಲಿ (Pune) ನಡೆದಿದೆ. ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಮಹಾರಾಷ್ಟ್ರದ (Maharashtra) ಕೆಲ ಬಿಜೆಪಿ (BJP) ನಾಯಕರು ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Advertisement
ಪಿಎಫ್ಐ ಸಂಘಟನೆಯ ಮೇಲೆ ರಾಷ್ಟ್ರವ್ಯಾಪಿಯಾಗಿ ಎನ್ಐಎ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಇದನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ಶುಕ್ರವಾರ ಪುಣೆ ನಗರದ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ರತಿಭಟನೆಯ ವೇಳೆ ಸುಮಾರು 40 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಾಹನದಲ್ಲಿ ಕೂರಿಸುವಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನು ಕೂಗಿದ್ದಾರೆ. ಇದನ್ನೂ ಓದಿ: ಇರಾನ್ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್
Advertisement
#WATCH | Maharashtra: ‘Pakistan Zindabad’ slogans were heard outside the District Collector’s office yesterday in Pune City where PFI cadres gathered against the recent ED-CBI-Police raids against their outfit. Some cadres were detained by Police; they were arrested this morning. pic.twitter.com/XWEx2utZZm
— ANI (@ANI) September 24, 2022
Advertisement
ಪ್ರತಿಭಟನಾಕಾರರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಕಾನೂನುಬಾಹಿರ ಪ್ರತಿಭಟನೆ ನಡೆಸಿರುವುದಕ್ಕಾಗಿ ಪಿಎಫ್ಐ ಸದಸ್ಯರ ವಿರುದ್ಧ ನಾವು ಈಗಾಗಲೇ ಪ್ರಕರಣ ದಾಖಲಿಸಿದ್ದೇವೆ. ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಷಯವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಪಾಟೀಲ್ ಹೇಳಿದ್ದಾರೆ.
Advertisement
ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿರುವುದಕ್ಕೆ 60 ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ಬಂಡ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ