CrimeInternationalLatestLeading NewsMain Post

ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

ಟೆಹರಾನ್: ಹಿಜಬ್ (Hijab) ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಇರಾನಿ ಯುವತಿ (Iranian Women) ಬಲಿಯಾದ ಪ್ರಕರಣ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಕಳೆದ ಒಂದು ವಾರದಿಂದಲೂ ಹಿಂಸಾತ್ಮಕ ಪ್ರತಿಭಟನೆ (Protest)  ನಡೆಯುತ್ತಿದ್ದು, 700ಕ್ಕೂ ಹೆಚ್ಚು ಮದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

ಒಟ್ಟು 739 ಮಂದಿಯನ್ನು ಬಂಧಿಸಿದ್ದು, ಅವರಲ್ಲಿ 60 ಮಂದಿ ಮಹಿಳೆಯರೂ ಇದ್ದಾರೆ ಎಂದು ಇರಾನ್ (Iran) ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಟಿಎಂಸಿಯ 21 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿಯಲ್ಲಿ ಆಕ್ಷೇಪವಿದೆ: ಮಿಥುನ್ ಚಕ್ರವರ್ತಿ

ಈಗಾಗಲೇ ಪ್ರತಿಭಟನೆ ಹತ್ತಿಕ್ಕಲು ಇಂಟರ್‌ನೆಟ್ (Internet) ಸ್ಥಗಿತಗೊಳಿಸಲಾಗಿದೆ. ವಾಟ್ಸಪ್, ಇನ್‌ಸ್ಟಾಗ್ರಾಮ್ (Instagram) ಬಳಕೆಯನ್ನೂ ನಿಷೇಧಿಸಲಾಗಿದೆ.

ಸತತ 9ನೇ ದಿನ ಇರಾನ್‌ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರಾರು ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‌ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕಂಟೆಸ್ಟೆಂಟ್ ನಂಬರ್ 1 ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ನಟ ಅರುಣ್ ಸಾಗರ್

ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ (Ebrahim Raisi Government) ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೆ ದೇಶದ ವಿವಿಧೆಡೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಆದರೂ ಪ್ರತಿಭಟನಾಕಾರರು ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮೃತರ ಸಂಖ್ಯೆ 50ಕ್ಕೆ ಏರಿಕೆಯಾದ ಬೆನ್ನಲ್ಲೇ ಅನಗತ್ಯ ಬಲಪ್ರಯೋಗ ಮಾಡದಂತೆ ವಿಶ್ವಸಂಸ್ಥೆ (UN) ಒತ್ತಾಯಿಸಿದೆ.

Live Tv

Leave a Reply

Your email address will not be published. Required fields are marked *

Back to top button