ಭೋಪಾಲ್: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಧ್ಯಪ್ರದೇಶದ (Madhya Pradesh) ಖಾರ್ಗೋನ್ನಲ್ಲಿ ಸಾಗುತ್ತಿದ್ದ ವೇಳೆ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಲಾಗಿದೆ ಎಂದು ಭಾರತೀಯ ಜನತಾ ಪಕ್ಷದ (BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ (Amit Malviya) ಶುಕ್ರವಾರ ಆರೋಪಿಸಿದ್ದಾರೆ.
ಈ ಬಗ್ಗೆ ಅಮಿತ್ ಮಾಳವಿಯಾ ಟ್ವಿಟ್ಟರ್ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ವೇಳೆ ಖಾರ್ಗೋನ್ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಂಸದರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಪಾಕ್ ಪರ ಘೋಷಣೆಯ ವಿಚಾರ ಬೆಳಕಿಗೆ ಬರುತ್ತಲೇ ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
After Richa Chaddha’s public application to join Rahul Gandhi’s Bharat “Jodo” Yatra, “Pakistan Zindabad” (listen towards the end of the video) slogans raised in Khargon.
INC MP posted the video and then deleted it after the faux pas came to light.
This is Congress’s truth… pic.twitter.com/ZkVEkd4pCf
— Amit Malviya (@amitmalviya) November 25, 2022
Advertisement
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಸಂವಹನದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತ್ ಜೋಡೋ ಯಾತ್ರೆಯನ್ನು ಅಪಖ್ಯಾತಿಗೊಳಿಸಲು ಬಿಜೆಪಿ ದೋಷಪೂರಿತ ವೀಡಿಯೋವನ್ನು ಹಂಚಿಕೊಂಡಿದೆ. ನಾವು ಈ ಘಟನೆಯ ಬಗ್ಗೆ ತಕ್ಷಣವೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಇಂತಹ ತಂತ್ರಗಾರಿಕೆಗಳನ್ನು ಎದುರಿಸಲು ಹಾಗೂ ತಿರುಗೇಟು ನೀಡಲು ಸಿದ್ದರಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್ಗಳು ತಾತ್ಕಾಲಿಕ ಸ್ಥಗಿತ
Advertisement
A video doctored by the Dirty Tricks Department of the BJP is doing the rounds to discredit the highly successful #BharatJodoYatra. We are taking the necessary legal action immediately. We are prepared for such tactics, and there will be payback.
— Jairam Ramesh (@Jairam_Ramesh) November 25, 2022
Advertisement
ಭಾರತ್ ಜೋಡೋ ಪಾದಯಾತ್ರೆ ಇದೀಗ ಮಧ್ಯಪ್ರದೇಶದಲ್ಲಿ ಸಾಗುತ್ತಿದ್ದು, 380 ಕಿ.ಮೀ ಕ್ರಮಿಸಿದ ಬಳಿಕ ಡಿಸೆಂಬರ್ 4 ರಂದು ರಾಜಸ್ಥಾನವನ್ನು ಪ್ರವೇಶಿಸಲಿದೆ. ಇದನ್ನೂ ಓದಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹ – ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್