ಬೆಂಗಳೂರು: ವಿಧಾನಸೌಧಲ್ಲಿ ಪಾಕ್ ಪರ (Pakistan Zindabad) ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ಪರೀಕ್ಷೆ ಮಾಡಿದ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತನ್ನ ವರದಿಯನ್ನು ಗೃಹ ಸಚಿವಾಲಯಕ್ಕೆ ನೀಡಿದೆ.
ಗುರುವಾರ ಸಂಜೆ ಎಫ್‌ಎಸ್‌ಎಲ್ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು ಯಾವುದೇ ಕ್ಷಣದಲ್ಲಿ ವರದಿ ಮಾಹಿತಿ ಪ್ರಕಟವಾಗುವ ಸಾಧ್ಯತೆಯಿದೆ. ರಾತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಂಪುಟ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಚರ್ಚೆಯಾಗಲಿದೆ.
Advertisement
Advertisement
ತಡರಾತ್ರಿ ವಿಚಾರಣೆ
ಘೋಷಣೆ ಕೂಗಿರುವ ಆರೋಪ ಎದುರಿಸುತ್ತಿರುವ ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ವರ್ತಕ ಮಹಮದ್ ಶಫಿ ನಾಶಿಪುಡಿಯನ್ನು ಧ್ವನಿ ಪರೀಕ್ಷೆಗಾಗಿ ಬೆಂಗಳೂರು ಪೊಲೀಸರು ತಡರಾತ್ರಿ ವಿಚಾರಣೆ ನಡೆಸಿದ್ದಾರೆ. ಆದರೆ ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನನ್ನ ತಾಯಾಣೆಗೂ ಆತರ ದೇಶದ್ರೋಹಿ ಘೋಷಣೆ ಕೂಗಿಲ್ಲ ಅಂತ ಮಹಮದ್ ಶಫಿ ನಾಶಿಪುಡಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ
Advertisement
ತನಿಖೆ ತೀವ್ರಗೊಳಿಸಿರುವ ಪೊಲೀಸರು ಬುಧವಾರ ರಾತ್ರಿಯೇ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಡಿಯೋ ಮಾದರಿಯನ್ನು ಸಂಗ್ರಹಿಸಿದ್ದಾರೆ.
Advertisement
ಬುಧವಾರ ಪಬ್ಲಿಕ್ ಟಿವಿಯನ್ನು (PUBLiC TV) ಸಂಪರ್ಕಿಸಿದ ವಿಧಾನಸೌಧ ಠಾಣೆ ಪೊಲೀಸರು ಮೂಲ ದೃಶ್ಯಾವಳಿ ಒದಗಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ, ಎಡಿಟ್ ಮಾಡದ ಮೂಲ ವಿಡಿಯೋ ತುಣಕನ್ನು ಪೊಲೀಸರಿಗೆ ನೀಡಿತ್ತು. ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?
2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪುನಿಂದ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ. ಆ ಮೂಲ ದೃಶ್ಯಾವಳಿಯನ್ನು ತಮಗೆ ನೀಡುತ್ತಿದ್ದೇವೆ ಮತ್ತು ಈ ಮೂಲಕ ತನಿಖೆಗೆ ಸಹಕರಿಸುತ್ತಿದ್ದೇವೆ ಎಂದು ಲಿಖಿತ ರೂಪದಲ್ಲಿ ಪೊಲೀಸರಿಗೆ ವಿವರಣೆಯನ್ನು ಪಬ್ಲಿಕ್ ಟಿವಿ ನೀಡಿತ್ತು.