ಪಹಲ್ಗಾಮ್ ದಾಳಿ ಮಾಡಿದವ್ರು ಪಾಕಿಗಳು, ವೋಟರ್ ಐಡಿ, ಚಾಕ್ಲೆಟ್ ಸಾಕ್ಷ್ಯ – ವಿಪಕ್ಷಗಳಿಗೆ ಎಳೆಎಳೆಯಾಗಿ ಘಟನೆ ವಿವರಿಸಿದ ಅಮಿತ್ ಶಾ

Public TV
3 Min Read
Amit Shah 2

– ಉಗ್ರರ ಬಳಿ ಸಿಕ್ಕ ರೈಫಲ್‌ ಪಾಕಿಸ್ತಾನದಲ್ಲಿ ತಯಾರಾಗಿದ್ದು

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terror Attack) ಮಾಡಿದವರು ಪಾಕಿಗಳೇ ಎಂಬುದಕ್ಕೆ ಸರ್ಕಾರದ ಬಳಿ ದೃಢವಾದ ಸಾಕ್ಷ್ಯಗಳಿವೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah), ಪಾಕ್‌ಗೆ ಕ್ಲೀನ್‌ ಚಿಟ್‌ ಕೊಟ್ಟ ಮಾಜಿ ಸಚಿವ ಚಿದರಂಬರಂ ವಿರುದ್ಧ ಹರಿಹಾಯ್ದರು.

ಆಪರೇಷನ್‌ ಸಿಂಧೂರ (Operation Sindoor) ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವರು, ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡರು. ದಾಳಿಕೋರರು ಪಾಕಿಸ್ತಾನಿಯರೇ ಎಂಬುದಕ್ಕೆ ಸರ್ಕಾದ ಬಳಿ ಸ್ಪಷ್ಟ ಸಾಕ್ಷ್ಯಗಳಿವೆ. ಹತ್ಯೆಯಾದ ಉಗ್ರರ ಬಳಿ ಪಾಕಿಸ್ತಾನದ ವೋಟರ್‌ ಐಡಿ ಪತ್ತೆಯಾಗಿದೆ. ಜೊತೆಗೆ ಉಗ್ರರು ಬಳಸಿದ್ದ ರೈಫಲ್‌, ಕಾಟ್ರಿಡ್ಜ್‌ ಪಾಕಿಸ್ತಾನದಲ್ಲಿ ತಯಾರಾದ ಅಸ್ತ್ರಗಳು. ಸ್ಥಳದಲ್ಲಿ ಸಿಕ್ಕ ಚಾಕ್ಲೆಟ್‌ ಕೂಡ ಪಾಕಿಸ್ತಾನದ್ದೇ, ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಅಂತ ಪ್ರಶ್ನಿಸಿದರು.

ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದರು ಅನ್ನೋದಕ್ಕೆ ಸಾಕ್ಷ್ಯ ಏನಿದೆ? ಪಾಕಿಸ್ತಾನವನ್ನು ಉಳಿಸುವುದರಿಂದ ಅವರಿಗೆ ಏನು ಸಿಗುತ್ತೆ? ಅಂತ ಚಿದಂಬರಂ ಕೇಳ್ತಾರೆ. ಇದರರ್ಥ ಪಾಕಿಸ್ತಾನಕ್ಕೆ ಅವರು ಕ್ಲೀನ್‌ ಚಿಟ್‌ ಕೊಡ್ತಿದ್ದಾರೆ ಅಂತ ಟೀಕಿಸಿದರು. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

ವಿಮಾನದಲ್ಲಿ ಉಗ್ರರ ರೈಫಲ್ ಚಂಡೀಗಢಕ್ಕೆ ಕಳಿಸಿ FSL ಟೆಸ್ಟ್
ಸಿಂಧೂರ ಚರ್ಚೆ ವೇಳೆ ಅಬ್ಬರಿಸಿ ಬೊಬ್ಬರಿಸಿದ ಅಮಿತ್‌ ಶಾ, ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನ ಇಲ್ಲಿಯೇ ಕೊಲ್ಲಲಾಗಿದೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ. ಸತ್ತ ಇಬ್ಬರು ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಇತ್ತು. ಅಲ್ಲದೇ ಸ್ಥಳದಲ್ಲಿ ಸಿಕ್ಕಿದ ಚಾಕ್ಲೆಟ್ ಪಾಕಿಸ್ತಾನದ್ದೇ ಎಂದು ಇಂಚಿಂಚೂ ಮಾಹಿತಿಯನ್ನ ವಿವರಿಸಿದ್ರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

ಮೂವರು ಉಗ್ರರ ಹತ್ಯೆ:
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಲೋಕಸಭೆಗೆ ತಿಳಿಸಿದರು. ʻಆಪರೇಷನ್‌ ಮಹಾದೇವ್‌ʼ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್‌ ಮೂಸಾ (Hashim Musa) ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

ಸೋಮವಾರ ನಡೆದ ʻಆಪರೇಷನ್‌ ಮಹಾದೇವ್‌ʼ (Operation Mahadev) ಬಗ್ಗೆ ವಿವರ ನೀಡಿದ ಶಾ, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಸುಲೇಮಾನ್‌ ಮೂಸಾ, ಜಿಬ್ರಾನ್‌, ಹಮ್ಜಾ ಅಫ್ಘಾನಿ ಉಗ್ರರನ್ನ ಹತ್ಯೆಗೈಯಲಾಗಿದೆ. ಸುಲೇಮಾನ್ ಲಷ್ಕರ್-ಎ-ತೈಬಾ (LeT) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರನಾಗಿದ್ದ. ಅಲ್ಲದೇ ಈ ಮೂವರನ್ನೂ ʻAʼ ಗ್ರೇಡ್‌ನ ಉಗ್ರರು ಎಂದು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

Share This Article