ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು (College Student) ವೇದಿಕೆ ಮೇಲೆ ಪಾಶ್ಚಿಮಾತ್ಯ ಹಾಡು ಹೇಳಿಕೊಂಡು ಮಾದಕ ನೃತ್ಯ (Hot Dance) ಮಾಡಿದ್ದಕ್ಕೆ ಕಾಲೇಜಿಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Pakistan: Khyber Medical University issues notice to NCS University System, Peshawar, warns of de-affiliation after this dance video from NCS goes viral ???? pic.twitter.com/MYd5P57gyN
— Sonam Mahajan (@AsYouNotWish) October 21, 2022
Advertisement
ಇದೇ ಅಕ್ಟೋಬರ್ 20ರಂದು ಎನ್‌ಸಿಎಸ್ ವಿಶ್ವವಿದ್ಯಾನಿಲಯದ (NCS University) ಅಂಗ ಸಂಸ್ಥೆಯಾಗಿರುವ ಕೆಎಂಯು ಕಾಲೇಜು ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಒಟ್ಟು 13 ಕಾರ್ಯಕ್ರಮಗಳ ಪೈಕಿ, ಕೊನೆಯ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಮಾದಕ ಉಡುಗೆಯಲ್ಲಿ ಪಾಶ್ಚಿಮಾತ್ಯ ಹಾಡು ಹೇಳುತ್ತಾ ಸೊಂಟ ಬಳುಕಿಸಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳೂ ಈಕೆಗೆ ಬೆಂಬಲ ನೀಡಿದ್ದಾರೆ. ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದಕ್ಕೆ ವಿವಿ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
Advertisement
— Sami (@Pediatric__OT) October 20, 2022
Advertisement
ಸುದ್ದಿ ತಿಳಿದ ಖೈಬರ್ ಪ್ರಾಂತ್ಯದ ವೈದ್ಯಕೀಯ ವಿಶ್ವವಿದ್ಯಾಲಯ (Khyber Medical University) ಎನ್‌ಸಿಎಸ್‌ನ ಕೆಎಂಯು ಕಾಲೇಜಿಗೆ ನೋಟಿಸ್ ನೀಡಿದ್ದು, ಈ ರೀತಿಯ ಘಟನೆ ಆಕ್ಷೇಪಾರ್ಹವಾಗಿದ್ದು, ಈ ಬಗ್ಗೆ ಕಾಲೇಜಿನ ನಿರ್ದೇಶಕರು ಉತ್ತರ ಕೊಡಬೇಕು ಎಂದು ತಾಕೀತು ಮಾಡಿದೆ. ಅಲ್ಲದೇ ಎಲ್ಲ ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳ ಸಮಯದಲ್ಲಿಯೂ ನೈತಿಕ ಮಾನದಂಡಗಳು ಹಾಗೂ ಸಂಸ್ಥೆಯ ಪಾವಿತ್ರ‍್ಯತೆಯನ್ನು ಕಾಯ್ದುಕೊಳ್ಳುವಂತೆ ಸೂಚಿಸಿದೆ.