ಇಸ್ಲಾಮಾಬಾದ್: 2001ರಲ್ಲಿ ಅಮೆರಿಕದ (America) ವಿಶ್ವ ವಾಣಿಜ್ಯ ಅವಳಿ ಕಟ್ಟಡದ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಹಾಗೂ ʼಲೇಡಿ ಅಲ್ ಖೈದಾʼ (Lady Al Qaeda) ಎಂದೇ ಕುಖ್ಯಾತಿ ಪಡೆದಿರುವ ಆಫಿಯಾ ಸಿದ್ದಿಕಿ ಬಿಡುಗಡೆಗೆ ಪಾಕಿಸ್ತಾನ (Pakistan) ಸರ್ಕಾರ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆಫಿಯಾ ಸಿದ್ದಿಕಿ (Aafia Siddiqui) ಸಹೋದರಿ ಫಾಜಿಯಾ ಸಿದ್ದಿಕಿಯೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ವಕೀಲ ಸ್ಮಿತ್, ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಗ್ವಾಂಟನಾಮೊ ಬೇ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರು ಪಾಕಿಸ್ತಾನಿ ಸಹೋದರರಾದ ಅಬ್ದುಲ್ ರಬ್ಬಾನಿ ಮತ್ತು ಅಹ್ಮದ್ ರಬ್ಬಾನಿ ಬಿಡುಗಡೆಯಲ್ಲಿ ಈ ವಕೀಲ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ ಈಗ ಸಿದ್ದಿಕಿ ಬಿಡುಗಡೆಗೆ ಕ್ರಮವಹಿಸಲು ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ
Advertisement
Advertisement
ಪಾಕಿಸ್ತಾನ ಸರ್ಕಾರವು ಆಕೆಯ ಬಿಡುಗಡೆಗೆ ‘ಕೈದಿಗಳ ವಿನಿಮಯ’ ನಿಯಮವನ್ನು ಪರಿಗಣಿಸಬೇಕು. ರಬ್ಬಾನಿ ಸಹೋದರರನ್ನು ಮರಳಿ ದೇಶಕ್ಕೆ ಕರೆತರಲು ಸಾಧ್ಯವಾಯಿತು. ಆದರೆ ಸಿದ್ದಿಕಿ ವಾಪಸ್ ಕರೆಸಿಕೊಳ್ಳಲು ಸರ್ಕಾರಕ್ಕೆ ಇನ್ನೂ ಏಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
ನಾನು 80 ಗ್ವಾಂಟನಾಮೊ ಬೇ ಖೈದಿಗಳ ಸ್ಥಿತಿ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಅವಳಷ್ಟು ಕೆಟ್ಟ ಸ್ಥಿತಿಯಲ್ಲಿ ಯಾರೂ ಇಲ್ಲ. ಆಕೆಯನ್ನು ಕರೆತರಲು ಪಾಕ್ ಸರ್ಕಾರ ಹಾಗೂ ಮಾಧ್ಯಮದ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
Advertisement
ಸಹೋದರಿ ಫೌಜಿಯಾ ಮಾತನಾಡಿ, ಜೈಲಿನಲ್ಲಿರುವ ನನ್ನ ಸಹೋದರಿ ಬಗ್ಗೆ ಇತ್ತೀಚೆಗೆ ಮಾಹಿತಿ ಸಿಗುತ್ತಿಲ್ಲ. ನಾವು ಅವಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಲು ಸಾಧ್ಯವಾಗಿಲ್ಲ. ಅವಳು ಸತ್ತಿದ್ದಾಳೆಂದು ಎಂದು ಮಾಹಿತಿ ಹರಿದಾಡಿತ್ತು. ಆದರೆ ಅಂತಿಮವಾಗಿ ಈ ವರ್ಷದ ಜನವರಿಯಲ್ಲಿ ಕ್ಲೈವ್ ಅವಳನ್ನು ಭೇಟಿಯಾಗಿದ್ದರು. ಅವಳು ಬದುಕಿದ್ದಾಳೆಂದು ನಂತರ ನಮಗೆ ತಿಳಿಯಿತು. ಸಿದ್ದಿಕಿ ತುಂಬಾ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮಕ್ಕಳಿಂದ ಆಕೆಯನ್ನು ದೂರ ಮಾಡಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆಸ್ಟ್ರೇಲಿಯಾ ಪೊಲೀಸರು
ಯಾರೀ ಆಫಿಯಾ ಸಿದ್ದಿಕಿ?
ಆಫಿಯಾ ಸಿದ್ದಿಕಿ ಪಾಕಿಸ್ತಾನ ಮೂಲದವಳು. 18 ವರ್ಷವಿದ್ದಾಗ ಸಹೋದರನ ನೆರವಿನಿಂದ ಅಮೆರಿಕಾಗೆ ಬಂದು, ಬೊಸ್ಟನ್‌ನ ಪ್ರತಿಷ್ಠಿತ MIT ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಳು. ನರ ವಿಜ್ಞಾನದಲ್ಲಿ PhD ಪಡೆದು, 29ನೇ ವಯಸ್ಸಿಗೇ ನರ ವಿಜ್ಞಾನಿಯಾಗಿ ಅಮೆರಿಕದಲ್ಲಿ ಗುರುತಿಸಿಕೊಂಡಿದ್ದಳು. ಆದರೆ 2008ರಲ್ಲಿ ಅಮೆರಿಕ ಇದೇ ನರ ವಿಜ್ಞಾನಿ ಆಫಿಯಾ ಸಿದ್ದಿಕಿಯನ್ನು ಆಫ್ಘಾನಿಸ್ತಾನದಲ್ಲಿ ಬಂಧಿಸಿತ್ತು. 2010ರಲ್ಲಿ ಆಕೆಯನ್ನು ಜೈಲಿಗಟ್ಟಿತು. ಸದ್ಯ ಆಕೆ ಇನ್ನೂ ಜೈಲಿನಲ್ಲಿದ್ದಾಳೆ.
2008ರಲ್ಲಿ ಅಮೆರಿಕದ ಸೈನಿಕರ ಮೇಲೆ ಗುಂಡಿನ ಸುರಿಮಳೆಗೈದ ಆಫಿಯಾ ಸಿದ್ಧಿಕಿಯನ್ನು ಬಂಧಿಸಲಾಗಿತ್ತು. ಉಗ್ರ ಸಂಘಟನೆ ಜೊತೆ ನೇರ ಸಂಪರ್ಕ ಹೊಂದಿದ್ದ ಕಾರಣ ಈಕೆ ಮೇಲೆ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ಹದ್ದಿನ ಕಣ್ಣಿಟ್ಟಿತ್ತು. ಅಷ್ಟೇ ಅಲ್ಲ 2001ರಲ್ಲಿ ಅಮೆರಿಕದ ಅವಳಿ ಕಟ್ಟಡ ಹಾಗೂ ಪೆಂಟಗಾನ್ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಇದೇ ಆಫಿಯಾ ಸಿದ್ದಿಕಿ. ಈ ಕಾರಣದಿಂದಾಗಿ ಈಕೆ ತಂಗಿದ್ದ ಕೊಠಡಿ ಮೇಲೆ ದಾಳಿ ಮಾಡಿದಾಗ ಪಿಸ್ತೂಲಿನಿಂದ ಅಮೆರಿಕ ಸೈನಿಕರ ಮೇಲೆ ಗುಂಡು ಹಾರಿಸಿದ್ದಳು. ಆದರೆ ಸೈನಿಕರು ಈಕೆಯನ್ನು ಬಂಧಿಸಿದ್ದರು. ಇದನ್ನೂ ಓದಿ: ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ
ಸಿದ್ದಿಕಿ ವಿಚಾರಣೆ ನಡೆಸಿದಾಗ, ಈಕೆ ಅಲ್ ಖೈದಾ ಉಗ್ರ ಸಂಘಟನೆ ಜೊತೆ ಸೇರಿ ಅಮೆರಿಕ ಅವಳಿ ಕಟ್ಟಡ, ಪೆಂಟಗಾನ್ ಮೇಲೆ ದಾಳಿಗೆ ಸಂಚು ರೂಪಿಸಿ ಎಲ್ಲಾ ಮಾಹಿತಿಯನ್ನು ಉಗ್ರರಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಓದಿದ ಆಫಿಯಾಗೆ ಬಹುತೇಕ ಪ್ರದೇಶಗಳ ಮಾಹಿತಿ ಸ್ಪಷ್ಟವಾಗಿ ತಿಳಿದಿತ್ತು. ಈಕೆಯ ಕೊಠಡಿಯಿಂದ ಬಾಂಬ್ ಟಿಪ್ಪಣಿ, ಅಮೆರಿಕದ ಪ್ರಮುಖ ಸ್ಥಳಗಳು ಹಾಗೂ ಎಲ್ಲಿ ಬಾಂಬ್ ಬ್ಲಾಸ್ಟ್ ಮಾಡಬಹುದು ಅನ್ನೋದನ್ನು ಮಾರ್ಕಿಂಗ್ ಮಾಡಿದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಅಮೆರಿಕ ಕೋರ್ಟ್ 2010ರಲ್ಲಿ ಆಫಿಯಾ ಸಿದ್ದಿಕಿಗೆ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಸಿದ್ದಿಕಿ ಬಿಡುಗಡೆಗೆ ಪಾಕಿಸ್ತಾನ ಸಾಕಷ್ಟು ಪ್ರಯತ್ನ ಮಾಡಿತ್ತು. ಅಲ್ಲದೇ ಉಗ್ರರು ಕೂಡ ಆಕೆಯನ್ನು ಬಿಡುಗಡೆ ಮಾಡುವಂತೆ ಅಮೆರಿಕಗೆ ಒತ್ತಾಯಿಸಿತ್ತು. ಇಲ್ಲದೇ ಇದ್ದರೆ ದಾಳಿ ನಡೆಸುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಸಿದ್ದಿಕಿ ಬಿಡುಗಡೆಗೆ ಪಾಕಿಸ್ತಾನ ಸರ್ಕಾರದ ನೆರವಿನಿಂದ ವಕೀಲರನ್ನು ಏರ್ಪಾಟು ಮಾಡಲಾಯಿತು. 2008ರಿಂದ 2010ರ ವರೆಗೆ ವಿಚಾರಣೆ ನಡೆದಿತ್ತು. ಆದರೆ ಇನ್ನೂ ಬಿಡುಗಡೆ ಸಾಧ್ಯವಾಗಿಲ್ಲ.