ಇಸ್ಲಾಮಾಬಾದ್: ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ (Pakistan) ನುಗ್ಗಿ ಕೊಲ್ಲುತ್ತೇವೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ.
ರಾಜನಾಥ್ ಸಿಂಗ್ (Rajnath Singh) ಅವರ ಹೇಳಿಕೆಯು ಪ್ರಚೋದನಕಾರಿಯಾಗಿದೆ. ಪಾಕಿಸ್ತಾನ ಯಾವಾಗಲೂ ಶಾಂತಿಗಾಗಿ ತನ್ನ ಬದ್ಧತೆಯನ್ನು ತೋರಿಸಿದೆ. ಪಾಕಿಸ್ತಾನ ತನ್ನದೇ ಆದ ಭದ್ರತೆಗೆ ಸಮರ್ಥವಾಗಿದೆ ಮತ್ತು ನಾವು ಇದನ್ನು ಇತಿಹಾಸದಲ್ಲಿ ಮತ್ತೆ ಮತ್ತೆ ಸಾಬೀತುಪಡಿಸಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದಾರೆ.
Advertisement
Advertisement
ರಕ್ಷಣಾ ಸಚಿವರು ಹೇಳಿದ್ದೇನು..?: ಪಾಕಿಸ್ತಾನದಲ್ಲಿ ಇತ್ತೀಚಿನ ಕಾರ್ಯಾಚರಣೆಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ನಮ್ಮ ದೇಶದ ಶಾಂತಿ ಕದಡಲು ಯಾರಾದರೂ ಪ್ರಯತ್ನಿಸಿದರೆ ನಾವು ಅವರಿಗೆ ತಕ್ಕ ಉತ್ತರ ನೀಡುತ್ತೇವೆ. ಯಾರಾದರೂ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿ ಪಾಕಿಸ್ತಾನಕ್ಕೆ ಪರಾರಿಯಾಗುತ್ತಿದ್ದರೆ, ನಾವು ಪಾಕಿಸ್ತಾನಕ್ಕೆ ಪ್ರವೇಶಿಸಿ ಅವರನ್ನು ಕೊಲ್ಲುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಭಯೋತ್ಪಾದಕರನ್ನು ಬಿಡಲ್ಲ, ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ: ರಾಜನಾಥ್ ಸಿಂಗ್ ಎಚ್ಚರಿಕೆ
Advertisement
Advertisement
ಭಾರತ ಎಂದಿಗೂ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ, ಯಾವುದೇ ದೇಶದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿಲ್ಲ. ಆದರೆ ಯಾರಾದರೂ ಭಾರತಕ್ಕೆ ಬೆದರಿಕೆ ಹಾಕಲು ಅಥವಾ ಇಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದರು.
ಭಾರತ ಎಷ್ಟು ಶಕ್ತಿಶಾಲಿ ಎಂಬುದನ್ನು ಪಾಕಿಸ್ತಾನ ಈಗ ಅರಿತುಕೊಂಡಿದೆ. ಭಾರತವು ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಯಾರಾದರೂ ಭಾರತದತ್ತ ದೃಷ್ಟಿ ಹರಿಸಿದರೆ, ಅವರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿದರೆ ಅವರು ಮತ್ತೆ ತಲೆ ಎತ್ತದಂತೆ ಮಾಡುತ್ತದೆ ಎಂದು ತಿಳಿಸಿದ್ದರು.