ದುಬೈ: ಟೀಂ ಇಂಡಿಯಾ ಹಾಗೂ ಪಾಕ್ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ನಾಯಕ ಸರ್ಫರಾಜ್ ಖಾನ್ ಟಾಸ್‍ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ಆಡಿದ್ದ ಖಲೀಲ್ ಹಾಗೂ ಶರ್ದೂಲ್ ಠಾಕೂರ್ ಬದಲಾಗಿ ಬುಮ್ರಾ, ಹಾರ್ದಿಕ್ ಪಾಂಡ್ಯ ತಂಡದಲ್ಲಿ ನಿರೀಕ್ಷೆಯಂತೆ ಸ್ಥಾನ ಪಡೆದಿದ್ದಾರೆ.
Advertisement
Here's our Playing XI for the game.#INDvPAK pic.twitter.com/haUlzKufY6
— BCCI (@BCCI) September 19, 2018
Advertisement
ಈ ವೇಳೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ನಿರೀಕ್ಷೆಯ ಪ್ರದರ್ಶನ ತಂಡ ನೀಡಿಲ್ಲ ಎನ್ನುವ ಅರಿವಿದೆ. ಆದರೆ ಹಾಂಕಾಂಗ್ ತಂಡ ಉತ್ತಮ ಪ್ರದರ್ಶನ ನೀಡಿದೆ. ಆದರೆ ಇಂದಿನ ಪಂದ್ಯ ಮಹತ್ವದಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತೇವೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಸರ್ಫರಾಜ್ ಖಾನ್, ಪಿಚ್ ಬ್ಯಾಟಿಂಗ್‍ಗೆ ಹೆಚ್ಚಿನ ನೆರವು ನೀಡುವ ಅವಕಾಶವಿದ್ದು, ಅದ್ದರಿಂದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಲಾಗಿದೆ. 280 ಪ್ಲಸ್ ರನ್ ಗಳಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
Advertisement
ಇತ್ತ ಪಂದ್ಯಕ್ಕೂ ಮೊದಲೇ ಇತ್ತಂಡಗಳ ಆಟಗಾರರನ್ನು ದುಬೈ ಸೆಕೆ ಕಾಡಿದೆ. ಇಂದು ಬೆಳಗ್ಗಿನ ಅಭ್ಯಾಸದ ವೇಳೆ ಆಟಗಾರರು ಬಿಸಿಲಿನ ಝಳಕ್ಕೆ ಸುಸ್ತಾಗಿದ್ದರು. ಇಂಗ್ಲೆಂಡ್ ಟೂರ್ನಿಯಲ್ಲಿ ಕೇವಲ 10 ಡಿಗ್ರಿ ತಾಪಮಾನ ಎದುರಿಸಿದ್ದ ಟೀಂ ಇಂಡಿಯಾ ಆಟಗಾರರು ಸದ್ಯ 35 ರಿಂದ 40 ಡಿಗ್ರಿ ತಾಪಮಾನಕ್ಕೆ ಹೊಂದಿಕೊಳ್ಳಬೇಕಿದೆ. ಇತ್ತ ಆಟಗಾರರು ಬಿಸಿಲಿನ ಬೇಗೆ ತಪ್ಪಿಸಲು ಅನುಸರಿಸಿದ ವಿಧಾನವನ್ನು ಬಿಸಿಸಿಐ ವೀಡಿಯೋ ಮೂಲಕ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Team line up for the big game!
For Live Updates https://t.co/U5ojkz1O0Y #INDvPAK #AsiaCup2018 #HarSaansMeinBolo pic.twitter.com/pZmPHVelNo
— Pakistan Cricket (@TheRealPCB) September 19, 2018
When the ☀️☀️ is blazing hot, you beat the heat #TeamIndia's way.
Watch the boys cope with the heat in style – by @28anand
Full video here – ????https://t.co/bnZkOHEUjw pic.twitter.com/UfIXhSQZvE
— BCCI (@BCCI) September 19, 2018