WTC: ನಂ.1 ಸ್ಥಾನ ಕಳೆದುಕೊಂಡ ಭಾರತ – ಅಗ್ರಸ್ಥಾನಕ್ಕೇರಿದ ಪಾಕಿಸ್ತಾನ

Public TV
2 Min Read
IndvsWi

ಪೋರ್ಟ್ ಆಫ್ ಸ್ಪೇನ್: 2023-25ನೇ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಭಾಗವಾಗಿ ಭಾರತ-ವೆಸ್ಟ್‌ ಇಂಡೀಸ್‌ (IndvsWI) ವಿರುದ್ಧ ನಡೆದ 2ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದರಿಂದ ಭಾರತ 1-0 ಅಂತರದಲ್ಲಿ ಗೆಲುವು ಸಾಧಿಸಿದರೂ ವೆಸ್ಟ್‌ ಇಂಡೀಸ್‌ ತಂಡವನ್ನು ತವರಿನಲ್ಲೇ ವೈಟ್‌ವಾಶ್‌ ಮಾಡುವ ಕನಸು ಭಗ್ನಗೊಂಡಿತು. ಅಲ್ಲದೇ ವೆಸ್ಟ್‌ ಇಂಡೀಸ್‌ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಮಳೆ ಅಡ್ಡಿಯಾದ ಕಾರಣ ಪೂರ್ಣ ಪಾಯಿಂಟ್ಸ್‌ ಪಡೆಯುವ ಅವಕಾಶ ಕಳೆದುಕೊಂಡಿತು.

WTC POINTS

ವಿಂಡೀಸ್‌ ದ್ವಿತೀಯ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ 24 ಅಂಕ ಪಡೆಯಬೇಕಿದ್ದ ಭಾರತ ತಂಡಕ್ಕೆ 16 ಅಂಕವಷ್ಟೇ ಲಭ್ಯವಾಯಿತು. ಇದರಿಂದ ಪಿಸಿಟಿ (Percentage Of Points Earned -ಗೆದ್ದ ಶೇಕಡಾವಾರು ಅಂಕ) 66.67ಕ್ಕೆ ಕುಸಿದು 2ನೇ ಸ್ಥಾನಕ್ಕೆ ಇಳಿಯಿತು. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆದ್ದ ನಂತರ 12 ಅಂಕ ಪಡೆದ ಪಾಕಿಸ್ತಾನ (Pakistan) 100 ಪಿಸಿಟಿಯೊಂದಿಗೆ ಅಗ್ರಸ್ಥಾನಕ್ಕೇರಿತು. ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ 54.17 ಅಂಕ ಪಡೆದು 3ನೇ ಸ್ಥಾನ, 29.17 ಅಂಕ ಗಳಿಸಿರುವ ಇಂಗ್ಲೆಂಡ್‌ 4ನೇ ಸ್ಥಾನ, 16.67 ಅಂಕ ಪಡೆದ ವೆಸ್ಟ್‌ ಇಂಡೀಸ್‌ 5ನೇ ಸ್ಥಾನದಲ್ಲಿವೆ.

ವಿಶ್ವಕಪ್‌ ಟೂರ್ನಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ ಸರಣಿಯನ್ನ ಆಡಲಿರುವ ಭಾರತ, ನಂತರ ಇಂಗ್ಲೆಂಡ್‌ ವಿರುದ್ಧ ಸ್ವದೇಶಿ ಸರಣಿಯನ್ನಾಡಲಿದೆ. ಇದನ್ನೂ ಓದಿ: ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

Pakistan 1

ವಿಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 141 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ 2ನೇ ಟೆಸ್ಟ್‌ ನಲ್ಲೂ ಯಶಸ್ವಿ ಪ್ರದರ್ಶನವನ್ನೇ ನೀಡಿತ್ತು. 4ನೇ ದಿನದಾಟದಲ್ಲಿ ಸ್ಫೋಟಕ ಆರಂಭ ಪಡೆದ ಟೀಂ ಇಂಡಿಯಾ 181 ರನ್‌ ಗಳಿಸುವ ಮೂಲಕ ವೆಸ್ಟ್‌ ಇಂಡೀಸ್‌ಗೆ 365 ರನ್‌ಗಳ ಗುರಿ ನೀಡಿತ್ತು. ಆದ್ರೆ 4ನೇ ದಿನದ ಅಂತ್ಯಕ್ಕೆ 76 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ 5ನೇ ದಿನದಲ್ಲಿ ಭಾರತದ ಎದುರು ವೈಟ್‌ವಾಶ್‌ ಆಗುವ ಸಾಧ್ಯತೆ ಹೊಂದಿತ್ತು. ಮಳೆ ಹಿನ್ನೆಲೆಯಲ್ಲಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

ಸಂಕ್ಷಿಪ್ತ ಸ್ಕೋರ್‌
ಭಾರತ: ಮೊದಲ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 421/5 ಡಿಕ್ಲೇರ್‌
ವೆಸ್ಟ್‌ ಇಂಡೀಸ್‌: ಮೊದಲ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 150/10
ವೆಸ್ಟ್‌ ಇಂಡೀಸ್‌ ಮೊದಲ ಟೆಸ್ಟ್‌ 2ನೇ ಇನ್ನಿಂಗ್ಸ್‌ – 130

ಭಾರತ: 2ನೇ ಟೆಸ್ಟ್‌‌ ಮೊದಲ ಇನ್ನಿಂಗ್ಸ್‌ – 438
ವೆಸ್ಟ್‌ ಇಂಡೀಸ್: 2ನೇ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 255
ಭಾರತ: 2ನೇ ಟೆಸ್ಟ್‌ 2ನೇ ಇನ್ನಿಂಗ್ಸ್‌ – 181/2 ಡಿಕ್ಲೇರ್‌
ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್‌ ಮೊದಲ ಇನ್ನಿಂಗ್ಸ್‌ – 76/2 ಡ್ರಾ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article