ಮುಂಬೈ: ಟಿ20 ವಿಶ್ವಕಪ್‍ಗಾಗಿ (T20 World) ಭಾರತದ ನೂತನ ಜೆರ್ಸಿ ಅನಾವರಣಗೊಂಡಿದೆ. ಅತ್ತ ಪಾಕಿಸ್ತಾನ (Pakistan) ತಂಡದ ಟಿ20 ವಿಶ್ವಕಪ್ ಜೆರ್ಸಿ (Jersey) ಎನ್ನುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಜೆರ್ಸಿ ಕುರಿತಾಗಿ ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳು ಪರಸ್ಪರ ಕಾಲೆಳೆಯುತ್ತಿದ್ದಾರೆ.
Advertisement
ಟಿ20 ವಿಶ್ವಕಪ್‍ಗಾಗಿ ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಕ್ಕೆ ನೀಲಿ ಹಾಗೂ ಕಡು ನೀಲಿ ಬಣ್ಣ ಮಿಶ್ರಿತ ಜೆರ್ಸಿ ಸಿದ್ಧವಾಗಿದೆ. ಈಗಾಗಲೇ ಬಿಸಿಸಿಐ (BCCI) ಈ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ತಂಡದ ಆಟಗಾರರಿರುವ ಪೋಸ್ಟರ್ ಒಂದು ವೈರಲ್ ಆಗುತ್ತಿದ್ದು, ಈ ಪೋಸ್ಟರ್‌ನಲ್ಲಿ ಹಸಿರು ಮತ್ತು ಲೈಟ್ ಹಸಿರು ಬಣ್ಣದ ಜೆರ್ಸಿಯಲ್ಲಿ ಪಾಕಿಸ್ತಾನ ತಂಡ ಕಾಣಿಸಿಕೊಂಡಿದೆ ಇದು ಟಿ20 ವಿಶ್ವಕಪ್‍ಗೆ ಪಾಕಿಸ್ತಾನ ತಂಡದ ಜೆರ್ಸಿ ಎಂದು ವೈರಲ್ ಆಗುತ್ತಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ರಾಹುಲ್ ಗಾಂಧಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ರೋಹಿತ್ – ಆ್ಯಂಕರ್ ಎಡವಟ್ಟು
Advertisement
https://twitter.com/_troll_10/status/1571542005620289536
Advertisement
ಪಾಕಿಸ್ತಾನದ ಈ ಜೆರ್ಸಿ ನೋಡಿದ ಬಳಿಕ ನೆಟ್ಟಿಗರು ಈ ಜೆರ್ಸಿ ಕಲ್ಲಂಗಡಿ ಹಣ್ಣಿನಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಟಕ್ಕರ್ ನೀಡಿರುವ ಪಾಕ್ ಅಭಿಮಾನಿಗಳು ಭಾರತದ ಜೆರ್ಸಿ ಹಾರ್ಪಿಕ್ ಬಾಟಲ್‍ನ ವಿನ್ಯಾಸದಂತಿದೆ ಎಂದು ಕಿಚಾಯಿಸಿದ್ದಾರೆ. ಇದೀಗ ಭಾರತ ಹಾಗೂ ಪಾಕಿಸ್ತಾನದ ಅಭಿಮಾನಿಗಳು ಟಿ20 ವಿಶ್ವಕಪ್‍ಗೂ ಮುನ್ನ ಜೆರ್ಸಿ ವಿಷಯವಾಗಿ ಫೈಟ್ ಆರಂಭಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ಗಾಗಿ `One Blue Jersey’ – ಟೀಂ ಇಂಡಿಯಾಕ್ಕೆ ನ್ಯೂ ಲುಕ್
Advertisement
Same????????????#IndianCricket #T20WorldCup pic.twitter.com/RMqnFZVzvp
— Anabia (@Bia_Sayss) September 19, 2022
ಬಿಸಿಸಿಐ ನೂತನ ಜೆರ್ಸಿಗೆ `ಒನ್ ಬ್ಲೂ ಜೆರ್ಸಿ ಎಂದು ಹೆಸರಿಟ್ಟಿದೆ. ಇದು ನೀಲಿ ಹಾಗೂ ರಾಯಲ್ ಬ್ಲೂ (ಕಡು ನೀಲಿ) ಬಣ್ಣದ ಮಿಶ್ರಣದಿಂದ ಕೂಡಿದೆ. ಈಗಾಗಲೇ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಆದರೆ ಪಾಕಿಸ್ತಾನ ಜೆರ್ಸಿಯನ್ನು ಅಧಿಕೃತವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅನಾವರಣಗೊಳಿಸಿಲ್ಲ. 2022ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗೆ ಟೂರ್ನಿ ನಡೆಯಲಿದೆ.