ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ (Pakistan) ಉಂಟಾಗಿರುವ ಆರ್ಥಿಕ ಬಿಕ್ಕಟ್ಟು (Economic Crisis) ಇದೀಗ ಅಲ್ಲಿನ ಸೇನೆಗೂ (Army) ತಟ್ಟಿದೆ. ಪಾಕ್ ಸೈನಿಕರಿಗೆ (Pakistan Soldiers) ಇದೀಗ ಸರಿಯಾಗಿ ಊಟವನ್ನೂ (Food) ನೀಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ರಾವಲ್ಪಿಂಡಿಯಲ್ಲಿರುವ ಹಿರಿಯ ಸೇನಾಧಿಕಾರಿಗಳಿಗೆ ಆಹಾರದ ಸಮಸ್ಯೆಯಾಗುತ್ತಿರುವ ಬಗ್ಗೆ ಪತ್ರಗಳು ಬಂದಿವೆ. ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ಹಾಗೂ ವಿಶೇಷ ಅನುದಾನಗಳ ಕಡಿತದಿಂದಾಗಿ ಸೈನಿಕರಿಗೆ ಸಾರಿಯಾಗಿ 2 ಹೊತ್ತು ಊಟ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ
Advertisement
Advertisement
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆ ಪಾಕಿಸ್ತಾನದ ಪಡೆಗಳು ದೇಶಾದ್ಯಂತ ವಿವಿಧ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಇದೀಗ ಆರ್ಥಿಕ ಕುಸಿತದಿಂದಾಗಿ ಸೈನಿಕರಿಗೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಸೈನಿಕರಿಗೆ ಹೆಚ್ಚಿನ ಆಹಾರ ಹಾಗೂ ವಿಶೇಷ ನಿಧಿಯ ಅಗತ್ಯವಿದೆ ಎಂದು ಡಿಜಿ ಮಿಲಿಟರಿ ಕಾರ್ಯಾಚರಣೆ ತಿಳಿಸಿದೆ.
Advertisement
ಪಾಕಿಸ್ತಾನದ 2022-23ರ ಬಜೆಟ್ ಪ್ರಕಾರ, ದೇಶ ಸೈನ್ಯಕ್ಕಾಗಿ 1.52 ಟ್ರಿಲಿಯನ್ ರೂ.ಯನ್ನು ಮೀಸಲಿಟ್ಟಿದೆ. ಇದು ಪ್ರಸ್ತುತ ಒಟ್ಟು ವೆಚ್ಚದ ಶೇ.17.5 ದಷ್ಟು ಆಗುತ್ತದೆ. ಇದು ಕಳೆದ ಆರ್ಥಿಕ ವರ್ಷಕ್ಕಿಂತಲೂ ಶೇ.11.16 ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಭದ್ರಕೋಟೆ ಸಂಡೂರಿಗೆ ಬರುತ್ತಿದ್ದಾರೆ ಅಮಿತ್ ಶಾ : ಬಿಜೆಪಿ ಪ್ಲ್ಯಾನ್ ಏನು?
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k