ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್‍ನಲ್ಲಿ ಶನಿವಾರ ತಡರಾತ್ರಿ ನಡೆದ ಹೈಡ್ರಾಮಾದಲ್ಲಿ ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದೆ. ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ಬೆಂಬಲಿಗರು ದೇಶಾದ್ಯಂತ ರ‍್ಯಾಲಿಯನ್ನು ನಡೆಸಿದರು.
ಚೌಕಿದಾರ್ ಚೋರ್ ಹೈ ಎಂದು ಘೋಷಣೆ ಕೂಗುವಾಗ ಪ್ರತಿಭಟನಾಕಾರರು ರ‍್ಯಾಲಿಯನ್ನು ನಡೆಸಿದರು. ಈ ರ‍್ಯಾಲಿಯನ್ನು ಉದ್ದೇಶಿಸಿ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಮಾತನಾಡಿ, ಈ ತಿಂಗಳು ಪರಿಸ್ಥಿತಿಗಳು ಬದಲಾಗುತ್ತವೆ. ಇಮ್ರಾನ್ ಖಾನ್ ಅವರ ಆಡಳಿತವನ್ನು ಬದಲಿಸಿ ಆಮದು ಮಾಡಿಕೊಂಡ ಸರ್ಕಾರವನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು.
راولپنڈی /10 اپریل
پنڈی کی عوام کا شکریہ ????????✌️
عمران خان سے اظہار یکجہتی کے سلسلے میں لال حویلی سے براہ راست عوام کے جام غفیر سے خطاب????????????https://t.co/Tc0IG0n2DJ@ImranKhanPTI pic.twitter.com/BG7uYtTOqv
— Sheikh Rashid Ahmed (@ShkhRasheed) April 10, 2022
ಮಧ್ಯರಾತ್ರಿಯ ಅವಿಶ್ವಾಸ ನಿರ್ಣಯವನ್ನು ಉಲ್ಲೇಖಿಸಿದ ಅವರು, ನೀವು ನಿಮ್ಮ ದೇಶವನ್ನು ಉಳಿಸಲು ಬಯಸಿದರೆ, ರಾತ್ರಿಯ ಕತ್ತಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ಹಗಲು ಬೆಳಕಿನಲ್ಲಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
ಇಮ್ರಾನ್ ಖಾನ್ ಅವರ ಜನಾದೇಶವನ್ನು ಕದ್ದಿದ್ದಕ್ಕೆ ಪಾಕಿಸ್ತಾನದ ಸೇನೆಯ ವಿರುದ್ಧ ಈ ಘೋಷಣೆಯನ್ನು ಕೂಗಲಾಗಿದೆ. ಇಂತಹ ಘೋಷಣೆಯನ್ನು ಕೂಗದಂತೆ ರಶೀದ್ ಮನವಿ ಮಾಡಿಕೊಂಡರು. ಜೊತೆಗೆ ಶಾಂತಿಯೊಂದಿಗೆ ಹೋರಾಟ ಮಾಡಲು ಸಲಹೆ ನೀಡಿದರು.
ಚೌಕಿದಾರ್ ಚೋರ್ ಹೈ ಎಂಬ ಘೋಷಣೆಯನ್ನು ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದಲ್ಲಿ 2019ರ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಳಸಿತ್ತು. ಇದರಿಂದಾಗಿ ರಾಹುಲ್ ಗಾಂಧಿ ಅವರು 2019ರಲ್ಲಿ ನ್ಯಾಯಾಂಗ ನಿಂದನೆಯ ಆರೋಪವನ್ನು ಎದುರಿಸಿದ್ದರು. ಇದಾದ ಬಳಿಕ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಿ ನ್ಯಾಯಾಲಯ ವಿರುದ್ಧ ವಿರುದ್ಧ ವಿಚಾರಣೆಯನ್ನು ಮುಕ್ತಗೊಳಿಸಿದರು. ಇದನ್ನೂ ಓದಿ: ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ: ಉದ್ಧವ್ ಠಾಕ್ರೆ