ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳಲು ಮಿತ್ರ ರಾಷ್ಟ್ರ ಚೀನಾದಿಂದ ಜೆ-10ಸಿ ಫೈಟರ್ ಜೆಟ್‌ಗಳನ್ನು ತರಿಸಿಕೊಂಡಿದೆ. ಪಾಕಿಸ್ತಾನ ಭಾರತದ ರಫೇಲ್ ಯುದ್ಧ ವಿಮಾನಕ್ಕೆ ಟಕ್ಕರ್ ನೀಡಲು ಈ ಫೈಟರ್ ಜೆಟ್‌ಗಳನ್ನು ಖರೀದಿಸಿದೆ.
ಶುಕ್ರವಾರ ಚೀನಾದಿಂದ ತರಿಸಿಕೊಂಡಿರುವ ಫೈಟರ್ ಜೆಟ್‌ಗಳನ್ನು ಪಾಕಿಸ್ತಾನದ ವಾಯುಪಡೆಗೆ ಸೇರ್ಪಡೆಗೊಳಿಸುವ ಸಲುವಾಗಿ ಪಂಜಾಬ್ ಅಟಾಕ್ ಜಿಲ್ಲೆಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ
Advertisement
Advertisement
ದುರದೃಷ್ಟವಶಾತ್ ಪಾಕಿಸ್ತಾನದಲ್ಲಿ ಅಸಮತೋಲನ ಉಂಟು ಮಾಡುವ ಪ್ರಯತ್ನಗಳು ನಡೆದಿವೆ. ಇದನ್ನು ಸರಿದೂಗಿಸಲು ನಮ್ಮ ರಕ್ಷಣಾ ಪಡೆಗೆ ಹೊಸದಾಗಿ ದೊಡ್ಡಮಟ್ಟದ ಸೇರ್ಪಡೆಗಳನ್ನು ಮಾಡುತ್ತಿದ್ದೇವೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ. ಈ ಮೂಲಕ ಭಾರತ, ಫ್ರಾನ್ಸ್‌ನಿಂದ ತರಿಸಿದ್ದ ರಫೇಲ್ ಯುದ್ಧ ವಿಮಾನಕ್ಕೆ ಪರೋಕ್ಷವಾಗಿ ಟಕ್ಕರ್ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
Advertisement
ಅಮೆರಿಕದಿಂದ ಎಫ್-40 ವಿಮಾನಗಳನ್ನು ತರಿಸಿಕೊಳ್ಳಲು ಬರೋಬ್ಬರಿ 40 ವರ್ಷಗಳೇ ಕಾಯಬೇಕಾಯಿತು. ಆದರೆ ಚೀನಾಗೆ ನಾವು ಬೇಡಿಕೆಯಿಟ್ಟ ಕೇವಲ 8 ತಿಂಗಳ ಅವಧಿಯಲ್ಲಿ ವಿಮಾನವನ್ನು ಒದಗಿಸಿದೆ ಎಂದು ಇಮ್ರಾನ್ ಖಾನ್, ಚೀನಾಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಾರ್ಚ್ 16ಕ್ಕೆ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ
Advertisement
ಭಾರತಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ ಇಮ್ರಾನ್, ಯಾವುದೇ ದೇಶ ಪಾಕಿಸ್ತಾನವನ್ನು ಎದುರು ಹಾಕಿಕೊಳ್ಳುವುದಕ್ಕೂ ಮೊದಲು ಎರಡು ಬಾರಿ ಯೋಚಿಸಬೇಕು. ನಮ್ಮ ಪಡೆಗಳು ಇದೀಗ ಯಾವುದೇ ಬೆದರಿಕೆಯನ್ನೂ ಎದುರಿಸಲು ಸುಸಜ್ಜಿತ ತರಬೇತಿ ಪಡೆದಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ಪಾಕಿಸ್ತಾನ, ಚೀನಾದಿಂದ 25 ಜೆ-10ಸಿ ವಿಮಾನಗಳನ್ನು ತರಿಸಿಕೊಂಡಿದೆ.