ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಳ್ಳೆಯ ವ್ಯಕ್ತಿತ್ವ ಇರುವ ಮನುಷ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಡಿ ಹೊಗಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಖುರೇಷಿ ಅವರು ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯದಲ್ಲಿ ಚಹಾ ನೀಡಿದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
Advertisement
Shah Mahmood Qureshi, Manmohan Singh ko yaad karwa rahay hain main apkay ghar aya tha, aap ne mujhe chai apnay hath se di.
Moral of the story: Tea was fantastic. pic.twitter.com/JaiCmTTBq0
— Naila Inayat (@nailainayat) November 9, 2019
Advertisement
ನಾನು ನಿಮ್ಮ ಮನೆಗೆ ಭೇಟಿ ನೀಡಿದ್ದೆ. ನಿಮ್ಮ ಪತ್ನಿ ಚಹಾ ತಯಾರಿಸಿದ್ದರು. ಸ್ವತಃ ಮನಮೋಹನ್ ಸಿಂಗ್ ಅವರೇ ಚಹಾವನ್ನು ತಂದುಕೊಟ್ಟಿದ್ದರು. ನಾನು ಮರಳಿ ಬಂದ ನಂತರ ಜನರಿಗೆ ಈ ಕಥೆಯನ್ನು ವಿವರಿಸಿದೆ. ಎಂತಹ ದೊಡ್ಡ ಮನುಷ್ಯ ಅವರು ಎಂದು ಹೇಳಿದೆ ಎಂದು ಖುರೇಷಿ ಮನಮೋಹನ್ ಸಿಂಗ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
Advertisement
ಈ ಘಟನೆಯು 90 ದಶಕದಲ್ಲಿ ಸಂಭವಿಸಿದೆ ಎಂದು ಖುರೇಷಿ ವಿಡಿಯೋದಲ್ಲಿ ನೆನಪಿಸಿಕೊಳ್ಳುತ್ತಾರೆ. ಇದರಲ್ಲಿ ಅವರು ಪ್ರಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರ್ಷರನ್ ಕೌರ್ ಅವರೊಂದಿಗೆ ಕುಳಿತಿದ್ದಾರೆ.
Advertisement
ಸಿಖ್ ಪವಿತ್ರ ಮಂದಿರದ ಉದ್ಘಾಟನಾ ಸಮಾರಂಭಕ್ಕಾಗಿ ಪಾಕಿಸ್ತಾನದ ಕಡೆಗೆ ತೆರಳಿದ ಭಾರತೀಯ ಯಾತ್ರಿಕರ ಮೊದಲ ಬ್ಯಾಚ್‍ನಲ್ಲಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.
ಮೊದಲ ಬ್ಯಾಚ್‍ನಲ್ಲಿ ಅಕಲ್ ತಖ್ತ್ ಜತೇದರ್ ಹರ್ಪೀತ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಸುಖ್ಖೀರ್ ಸಿಂಗ್ ಬಾದಲ್, ಹರ್ಸಿಮ್ರತ್ ಕೌರ್ ಬಾದಲ್, ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ತೆರಳಿದ್ದಾರೆ.