ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ (Pakistan) ಆಹಾರಕ್ಕಾಗಿ ಜನರು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ಆಹಾರಕ್ಕಾಗಿ (Food) ಜನರು ಗೋಧಿ (Wheat) ಮೂಟೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್ (Truck) ಹಿಂದೆ ಓಡುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನದಲ್ಲಿ ದಿನೇ ದಿನೇ ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಆಹಾರದ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜನರು ಗೋಧಿಯನ್ನು ಪಡೆಯಲು ಈ ರೀತಿ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಈ ವೀಡಿಯೋವನ್ನು ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಜೆಕೆಜಿಬಿಎಲ್ ಅಧ್ಯಕ್ಷ ಪ್ರೊ. ಸಜ್ಜದ್ ರಾಜಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ವೀಡಿಯೋದ ಬಗ್ಗೆ ಅವರು, “ಜನರು ಬೈಕ್ (Bike) ರ‍್ಯಾಲಿ ನಡೆಸುತ್ತಿಲ್ಲ. ಬದಲಿಗೆ ಒಂದು ಪ್ಯಾಕೆಟ್ ಗೋಧಿ ಹಿಟ್ಟನ್ನು ಖರೀದಿಸಲು ಈ ರೀತಿಯಾಗಿ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಇದನ್ನು ನೋಡಿದರೇ ಪಾಕಿಸ್ತಾನದಲ್ಲಿ ನಮಗೆ ಭವಿಷ್ಯವಿದೆಯೇ” ಎಂದು ಪ್ರಶ್ನಿಸಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?: ಬೈಕ್‍ನಲ್ಲಿ ಹೋಗುತ್ತಿರುವ ಕೆಲವರು ಹಿಟ್ಟಿನ ಮೂಟೆಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಜನರು ಹಿಟ್ಟಿನ ಪ್ಯಾಕೆಟ್ ಅನ್ನು ಖರೀದಿಸಲು ವಾಹನವನ್ನು ಹಿಂಬಾಲಿಸುತ್ತಿದ್ದಾರೆ. ಇದನ್ನೂ ಓದಿ: Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ
Advertisement
This isn’t a motorcycle rally, ppl in #Pakistan are desperately chasing a truck carrying wheat flour, hoping to buy just 1 bag. Ppl of #JammuAndKashmir should open their eyes. Lucky not to be #Pakistani & still free to take decision about our future. Do we have any future with????????? pic.twitter.com/xOywDwKoiP
— Prof. Sajjad Raja (@NEP_JKGBL) January 14, 2023
ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಆಹಾರಕ್ಕಾಗಿ ಹಾಹಾಕಾರ ಎದುರಾಗಿದೆ. ಸರ್ಕಾರದ ಸಬ್ಸಿಡಿ ಗೋಧಿಯ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದರೂ, ಇತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ ವಾರದಿಂದ ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಒಂದು ಪ್ಯಾಕೆಟ್ ಹಿಟ್ಟು 3,000 ಪಾಕಿಸ್ತಾನಿ ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿಯ ಕೊರತೆಯ ನಡುವೆಯೇ ಜನರು ಗಂಟೆಗಟ್ಟಲೆ ಉದ್ದನೆಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಎಂ, ನಿರಾಣಿ ಗರಂ; ಯತ್ನಾಳ್‌ಗೆ ಮೂಗುದಾರ ಹಾಕುವ ಬಗ್ಗೆ ನಡ್ಡಾ ಎದುರು ಪ್ರಸ್ತಾಪಕ್ಕೆ ನಿರ್ಧಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k