ಇಸ್ಲಾಮಾಬಾದ್: ಟಿ20 ವಿಶ್ವಕಪ್ (T20 World Cup) ಟೂರ್ನಿ ನಡೆಯುತ್ತಿದೆ. ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಪಾಕಿಸ್ತಾನ ಸೋಲನ್ನು ಎದುರಿಸಬೇಕಾಯಿತು. ಎರಡೂ ತಂಡಗಳ ಬೆಂಬಲಿಗರು ತಮ್ಮ ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಇದೇ ವೇಳೆ ಪಾಕ್ ಅಭಿಮಾನಿಯೊಬ್ಬ ತನ್ನ ಟ್ರ್ಯಾಕ್ಟರ್ ಮಾರಾಟ ಮಾಡಿ ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ. ಆದರೆ ಅವರ ತಂಡವು ಸೋತಿದ್ದು, ಇದರಿಂದ ಆತ ನಿರಾಸೆಗೊಂಡ ಪ್ರಸಂಗ ನಡೆದಿದೆ.
ಈ ಸಂಬಂಧ ಅಭಿಮಾನಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ಪಂದ್ಯವನ್ನು ವೀಕ್ಷಿಸಲು 2.50 ಲಕ್ಷ ರೂ. (3000 ಡಾಲರ್)ಗೆ ತನ್ನ ಟ್ರ್ಯಾಕ್ಟರ್ ಮಾರಿ ಟಿಕೆಟ್ ಖರೀದಿಸಿದ್ದೇನೆ. ಮೊದಲು ಭಾರತದ ಸ್ಕೋರ್ ನೋಡಿದಾಗ ನಾವು ಈ ಪಂದ್ಯದಲ್ಲಿ ಸೋಲುತ್ತೇವೆ ಎಂದು ನಾವು ಭಾವಿಸಿರಲಿಲ್ಲ. ಆದರೆ ಬಾಬರ್ ಅಜಮ್ ಔಟಾದ ನಂತರ ಎಲ್ಲರೂ ನಿರಾಶೆಗೊಂಡೆವು . ಪಾಕಿಸ್ತಾನ ತಂಡ ಇನ್ನೂ ಹೆಚ್ಚು ಶ್ರಮಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಇದೇ ವೇಳೆ ನಾನು ಭಾರತ ತಂಡ ಮತ್ತು ಅವರ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ ಎಂದರು.
ಭಾರತ ಮತ್ತು ಪಾಕಿಸ್ತಾನ (Team India Vs Pakistan) ನಡುವಿನ ಟಿ20 ವಿಶ್ವಕಪ್‌ನ ಅಮೋಘ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ 119 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಟೀಂ ಇಂಡಿಯಾ 6 ರನ್‌ಗಳಿಂದ ಗೆದ್ದುಕೊಂಡಿತು. ಇದನ್ನೂ ಓದಿ: ಬುಮ್ರಾ ಬೆಂಕಿ ಬೌಲಿಂಗ್, ಭಾರತಕ್ಕೆ ರೋಚಕ 6 ರನ್ ಜಯ – ಗುಂಪು ಹಂತದಲ್ಲೇ ಪಾಕ್ ಹೊರಕ್ಕೆ?