ಶ್ರೀನಗರ: ಮೋದಿ (Narendra Modi) ಭಾಷಣದ ಬೆನ್ನಲ್ಲೇ ಪಾಕಿಸ್ತಾನ (Pakistan) ಮತ್ತೆ ಕದನ ವಿರಾಮ (Ceasefire Violation) ಉಲ್ಲಂಘಿಸಿದೆ. ಜಮ್ಮು ಹಾಗೂ ಪಂಜಾಬ್‌ನಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದೆ.
ಜಮ್ಮು, ಸಾಂಬಾ ಸೇರಿದಂತೆ ಹಲವೆಡೆ ಡ್ರೋನ್‌ಗಳು ಹಾರಾಟ ನಡೆಸಿವೆ. ಅಲ್ಲದೇ ಪಂಜಾಬ್‌ನ ಅಮೃತಸರದಲ್ಲೂ ಡ್ರೋನ್‌ಗಳ ಹಾರಾಟ ಕಂಡುಬಂದಿದೆ. ಡ್ರೋನ್ ಹಾರಾಟ ಹಿನ್ನೆಲೆ ಅಮೃತಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮಾತ್ರವಲ್ಲದೇ ಮನೆಯಿಂದ ನಾಗರಿಕರು ಹೊರಬಾರದಂತೆ ಸೂಚನೆ ನೀಡಲಾಗಿದೆ. ಸಾಂಬಾ ಪ್ರದೇಶದಲ್ಲಿ ಬ್ಲಾಕ್‌ಔಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪಾಕ್ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್ ಮಾತು
#WATCH | J&K: Red streaks seen and explosions heard as India’s air defence intercepts Pakistani drones amid blackout in Samba.
(Visuals deferred by unspecified time) pic.twitter.com/EyiBfKg6hs
— ANI (@ANI) May 12, 2025
ಸುಮಾರು 50-60 ಪಾಕ್ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪಾಕ್‌ನ ಎಲ್ಲಾ ಡ್ರೋನ್‌ಗಳನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಂ ನೆಲಕ್ಕೆ ಉರುಳಿಸಿದೆ. ಪಾಕ್ ಡ್ರೋನ್ ದಾಳಿ ಬೆನ್ನಲ್ಲೇ ದೆಹಲಿ-ಅಮೃತಸರದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇಂಡಿಗೋ ವಿಮಾನ ಮತ್ತೆ ದೆಹಲಿಗೆ ವಾಪಸ್ ಆಗಿದೆ. ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ
ಇದಕ್ಕೂ ಮುನ್ನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರುವುದಿಲ್ಲ. ಭಯೋತ್ಪಾದಕತೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಬಯಸುತ್ತೇನೆ. ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಪಿಒಕೆ ಮರಳುವುದು ಒಂದು ಬಾಕಿಯಿದೆ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು ಅಷ್ಟೇ ಎಂದು ಖಡಕ್ ಸಂದೇಶ ರವಾನಿಸಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾದ ಸೈನಿಕರಿಗೆ ಸೆಲ್ಯೂಟ್: ಮೋದಿ