ನವದೆಹಲಿ: ಭೂಕಂಪ (Earthquake) ಪೀಡಿತ ಟರ್ಕಿಗೆ (Turkey) ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ಕಳುಹಿಸಲು ಭಾರತೀಯ ವಾಯುಪಡೆ ವಿಮಾನಕ್ಕೆ ತನ್ನ ವಾಯು ಪ್ರದೇಶದಲ್ಲಿ ಸಂಚರಿಸಲು ಪಾಕಿಸ್ತಾನ (Pakistan) ನಿರ್ಬಂಧ ಹೇರಿದೆ.
ಮಂಗಳವಾರ ಮುಂಜಾನೆ ಟರ್ಕಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ. ಭಾರತ ಅಗತ್ಯವಿರುವ ದೇಶಗಳಿಗೆ ನೆರವನ್ನು ನೀಡಲು ಮುಂದಾದಾಗ ಅದನ್ನು ತಡೆಯಲು ಪಾಕಿಸ್ತಾನ ಮಾಡಿರುವ 2ನೇ ಪ್ರಯತ್ನ ಇದಾಗಿದೆ.
Advertisement
Advertisement
ಸೋಮವಾರ ಟರ್ಕಿ ಹಾಗೂ ಸಿರಿಯಾದಲ್ಲಿ 7.9 ತೀವ್ರತೆಯ ಭಾರೀ ಭೂಕಂಪದಿಂದಾದ ದೇಶಗಳು ತತ್ತರಿಸಿ ಹೋಗಿವೆ. ಇದು ಪಶ್ಚಿಮ ಏಷ್ಯಾದ ಇತಿಹಾಸದಲ್ಲಿಯೇ ಅತ್ಯಂತ ವಿನಾಶಕಾರಿ ಭೂಕಂಪ ಎಂದು ಪರಿಗಣಿಸಲಾಗಿದೆ. ಭೀಕರ ಭೂಕಂಪದಿಂದಾಗಿ 5 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸಾವಿರಾರು ಜನರು ಶಿಥಿಲಗೊಂಡಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ
Advertisement
ಎನ್‌ಡಿಆರ್‌ಎಫ್ ತಂಡಗಳು ಈಗಾಗಲೇ ಭೂಕಂಪ ಪೀಡಿತ ದೇಶಗಳಿಗೆ ಸಹಾಯ ಮಾಡಲು ವೈದ್ಯರು ಹಾಗೂ ಇನ್ನಿತರ ಸೌಲಭ್ಯಗಳೊಂದಿಗೆ ಅದಾನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಆದರೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಬಳಸಲು ಭಾರತದ ವಿಮಾನಕ್ಕೆ ಅನುಮತಿಯನ್ನು ನಿರಾಕರಿಸಿದೆ.
Advertisement
ಕಳೆದ ಬಾರಿ 2021 ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಾರತ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಭಾಗವಾಗಿ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಲು ನಿರ್ಧರಿಸಿತ್ತು. ಆದರೆ ಪಾಕಿಸ್ತಾನ ಭಾರತಕ್ಕೆ ತನ್ನ ಭೂಪ್ರದೇಶವನ್ನು ಬಳಸದಂತೆ ತಡೆದಿತ್ತು. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು
ಭಾರತದಿಂದ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲು ವಾಘಾ ಗಡಿಯಿಂದ ಪಾಕಿಸ್ತಾನದ ಮಾರ್ಗವಾಗಿ ಟ್ರಕ್‌ಗಳಲ್ಲಿ ಕಳುಹಿಸಲು ಮಾತುಕತೆ ನಡೆಸಿತ್ತು. ಮಾನವೀಯ ನೆರವಿನ ಹಿನ್ನೆಲೆಯಾಗಿ ಬಳಿಕ ಪಾಕಿಸ್ತಾನ ತನ್ನ ಮಾರ್ಗದ ಮೂಲಕ ಟ್ರಕ್‌ಗಳಿಗೆ ನೆರವನ್ನು ಸಾಗಿಸಲು ಅನುಮತಿ ನೀಡಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k