ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಹರ್ಯಾಣದ ಮೂಲದ ಯುವತಿಯನ್ನು ಮದುವೆಯಾಗಲಿದ್ದಾರೆ ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ.
ಪಾಕ್ ತಂಡದ ವೇಗದ ಬೌಲರ್ ಆಗಿರುವ 25 ವರ್ಷದ ಹಸನ್ ಅಲಿ ಹರಿಯಾಣದ ಶಾಮಿಯಾ ಅರ್ಜೂ ಎಂಬಾಕೆಯನ್ನು ವರಿಸಲಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರ ವಿಹಾರ ಸಮಾರಂಭ ಆಗಸ್ಟ್ 20 ರಂದು ದುಬೈನಲ್ಲಿ ನಡೆಯಲಿದೆ.
just wanna clarify my wedding is not confirmed yet, our families have yet to meet and decide upon it. will make a public announcement very soon in sha allah. #gettingreadyforfamilymeetup
— Hassan Ali ???????? (@RealHa55an) July 30, 2019
ಅಂದಹಾಗೇ ಶಾಮಿಯಾ ಅರ್ಜೂ ಸದ್ಯ ದುಬೈ ನಿವಾಸಿಯಾಗಿದ್ದು, ಅಲ್ಲಿನ ಖಾಸಗಿ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಯಾಣ ಮೂಲದವರಾದರೂ ಶಾಮಿಯಾ ಇಂಗ್ಲೆಂಡ್ನಲ್ಲಿ ಶಿಕ್ಷಣ ಪಡೆದಿದ್ದು, ಆ ಬಳಿಕ ಪೋಷಕರೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಅವರ ಕುಟುಂಬಸ್ಥರು ದೆಹಲಿಯಲ್ಲಿ ವಾಸಿಸುತ್ತಿದ್ದರೆ.
ದುಬೈನಲ್ಲಿಯೇ ಗೆಳತಿಯ ಮೂಲಕ ಶಾಮಿಯಾ ಹಸನ್ರನ್ನ ಮೊದಲು ಭೇಟಿ ಮಾಡಿದ್ದರು ಎಂದು ಮಾಧ್ಯಮ ವರದಿ ಮಾಡಿದೆ. ಹಸನ್ ಪಾಕ್ ಪರ 9 ಟೆಸ್ಟ್, 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2017ರ ಚಾಂಪಿಯನ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೊಯೆಬ್ ಮಲಿಕ್ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು 2010 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 2018 ರ ಅಕ್ಟೋಬರ್ 30 ರಂದು ಮಗು ಕೂಡ ಜನಿಸಿತ್ತು.