ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imrankhan) ಮತ್ತೆ ಚುನಾವಣೆಯಲ್ಲಿ (Elections) ಸ್ಪರ್ಧಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಥಳೀಯ ಕೋರ್ಟ್ (Court) ಗ್ರೀನ್‌ಸಿಗ್ನಲ್ ನೀಡಿದೆ.
ಉಡುಗೊರೆ ದುರ್ಬಳಕೆ ಪ್ರಕರಣದಲ್ಲಿ ಇಮ್ರಾನ್‌ಖಾನ್ ಅವರನ್ನು ಮುಂದಿನ 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಳೆದವಾರ ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಇಮ್ರಾನ್‌ಖಾನ್ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಮ್ರಾನ್‌ಖಾನ್ ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ನಿರ್ಬಂಧ ಹೇರಿಲ್ಲ ಎಂದು ಹೇಳಿತು. ಆದ್ದರಿಂದಾಗಿ ಇದೇ ಅಕ್ಟೋಬರ್ 30 ರಂದು ನಡೆಯುವ ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದ ಖರ‍್ರಂ ಜಿಲ್ಲೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಖಾನ್‌ಗೆ ಅವಕಾಶವಿದೆ ಎಂದು ಹೇಳಿತು. ಇದನ್ನೂ ಓದಿ: ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ
Advertisement
Advertisement
ಏನಿದು ಪ್ರಕರಣ?
ಇಮ್ರಾನ್‌ಖಾನ್ ಉಡುಗೊರೆಯಾಗಿ (Gift) ನೆಕ್ಲೆಸ್‌ನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ 18 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಇಮ್ರಾನ್ ಖಾನ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಪಾಕಿಸ್ತಾನ (Pakistan) ಉನ್ನತ ತನಿಖಾ ಸಂಸ್ಥೆ ವಿಚಾರಣೆ ಆರಂಭಿಸಿತ್ತು. ಈ ಸಂಬಂಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ತನಿಖೆ ಕೈಗೊಂಡಿತ್ತು. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ
Advertisement
Advertisement
ಕಾನೂನಿನ ಪ್ರಕಾರ (Law Of Pakistan), ರಾಜ್ಯದ ಅಧಿಕಾರಿಗಳು ಗಣ್ಯರಿಂದ ಸ್ವೀಕರಿಸುವ ಉಡುಗೊರೆಗಳನ್ನು ತೋಶಾ-ಖಾನಾಗೆ ಸಲ್ಲಿಸಬೇಕಾಗುತ್ತದೆ. ಅವರು ಉಡುಗೊರೆಯನ್ನು ಸಲ್ಲಿಸಲು ವಿಫಲರಾದರೆ ಅಥವಾ ಉಡುಗೊರೆ ಮೌಲ್ಯದ ಅರ್ಧದಷ್ಟು ಮೊತ್ತವನ್ನು ಸಲ್ಲಿಸಿದರೆ, ಅದು ಕಾನೂನುಬಾಹಿರ ಕೃತ್ಯವಾಗಿದೆ.