ಇಸ್ಲಾಂಬಾದ್: ಫೆಬ್ರವರಿ 26ರ ಬೆಳಗ್ಗಿನ ಜಾವ ಪಾಕಿಸ್ತಾನದಲ್ಲಿರುವ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವ ಮೂಲಕ ಪುಲ್ವಾಮ ದಾಳಿಗೆ ಪ್ರತಿಕಾರ ತೆಗೆದುಕೊಂಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಸೇನೆಯೆ ವಕ್ತಾರ ಆಸಿಫ್ ಗಫೂರ್ ಭಾರತಕ್ಕೆ ಚಾಲೆಂಜ್ ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತದ ಮಾಧ್ಯಮಗಳ ಕೆಲ ಸುದ್ದಿಯ ಚಿತ್ರಗಳನ್ನು ಪ್ರದರ್ಶಿಸಿದ ಆಸಿಫ್ ಗಫೂರ್, ಭಾರತೀಯ ವಾಯುಸೇನೆ ಬಾಲ್ ಕೋಟ್, ಮುಜಾಫರ್‍ಬಾದ್ ಮತ್ತು ಚಿಕೋಟಿಯಲ್ಲಿ ದಾಳಿ ನಡೆಸಿದೆಯಂತೆ. ಬರೋಬ್ಬರಿ 21 ನಿಮಿಷಗಳ ಕಾಲ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಇದೊಂದು ದೊಡ್ಡ ಸುಳ್ಳಾಗಿದ್ದು, ಧೈರ್ಯವಿದ್ದರೆ ಪಾಕ್ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸಲಿ ಎಂದು ಆಸಿಫ್ ಗಫೂರ್ ಚಾಲೆಂಜ್ ಹಾಕಿದ್ದಾರೆ.
ವಾಯುಸೇನೆಯ ಜೆಟ್‍ಗಳು ಯಾವಾಗಲೂ ಹಾರಾಡುವುದಿಲ್ಲ. ಆದ್ರೆ ಗಡಿರೇಖೆಯ ನಮ್ಮ ನಿಗಾ ಯಾವಾಗಲೂ ಇರುತ್ತದೆ. ಫೆಬ್ರವರಿ 14ರ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಭಾರತ ಪಾಕಿಸ್ತಾನದ ಸೈನಿಕರು ಇಲ್ಲದ ಜಾಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು. ಸೈನಿಕರಲ್ಲದ ಸಾಮಾನ್ಯ ಜನರು ವಾಸವಾಗಿರುವ ಸ್ಥಳದಲ್ಲಿ ಬಾಂಬ್ ಹಾಕಲು ಪ್ಲಾನ್ ಮಾಡಿತ್ತು. ಸಾಮಾನ್ಯ ಜನರ ಮೇಲೆ ದಾಳಿ ನಡೆಸುವ ಮೂಲಕ ನಾವು ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳಲು ಭಾರತ ಪ್ಲಾನ್ ಮಾಡಿತ್ತು ಎಂದು ಗಫೂರ್ ಆರೋಪಿಸಿದ್ದಾರೆ.
ಭಾರತದ ಯುದ್ಧವಿಮಾನಗಳು ನಮ್ಮತ್ತ ಪ್ರವೇಶಿಸುತ್ತಿದ್ದಂತೆ ನಮ್ಮವರು ದಾಳಿ ನಡೆಸಿದಾಗ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಎಸೆದು ಪರಾರಿಯಾದ್ರು. ಭಾರತ ತಾವು 200ರಿಂದ 300 ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv