– ಮತ್ತೆ ಯೂಟರ್ನ್ ಹೊಡೆದು ಆದೇಶ ವಾಪಸ್ ಪಡೆದ ಪಿಸಿಬಿ
ಇಸ್ಲಾಮಾಬಾದ್: ದೇಶೀಯ ಪಂದ್ಯವೊಂದರಲ್ಲಿ ಪ್ಯಾಲೆಸ್ತೀನ್ ಧ್ವಜವನ್ನು (Palestine Flag) ಬ್ಯಾಟ್‌ನಲ್ಲಿ ಪ್ರದರ್ಶನಿಸಿದ್ದ ಬ್ಯಾಟರ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಂಡ ವಿಧಿಸಿ ನಂತರ ಆದೇಶ ವಾಪಸ್ ಪಡೆದುಕೊಂಡಿರುವ ಘಟನೆ ನಡೆದಿದೆ.
Advertisement
ಭಾನುವಾರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಜಂ ಖಾನ್ ಅವರ ತಂಡ ಕರಾಚಿ ವೈಟ್ಸ್ ಲಾಹೋರ್ ಬ್ಲೂಸ್ ವಿರುದ್ಧ ಸೆಣಸಿತ್ತು. ಆಗ ಖಾನ್ ಬ್ಯಾಟ್ ಪ್ಯಾಲೆಸ್ತೀನ್ ಧ್ವಜವನ್ನು ಒಳಗೊಂಡಿತ್ತು. ಆಜಮ್‌ಗೆ ಪಂದ್ಯದ ಶುಲ್ಕದಲ್ಲಿ 50% ದಂಡವನ್ನು ವಿಧಿಸಲಾಯಿತು. ನಂತರ ಪಿಸಿಬಿ ಪರಿಶೀಲಿಸಿ, ಮ್ಯಾಚ್ ಅಧಿಕಾರಿಗಳು ವಿಧಿಸಿದ ಪೆನಾಲ್ಟಿಯನ್ನು ಮನ್ನಾ ಮಾಡಲು ನಿರ್ಧರಿಸಿತು. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್
Advertisement
Advertisement
ಆಜಮ್ ಖಾನ್‌ಗೆ ಪಂದ್ಯದ ಅಧಿಕಾರಿಗಳು ವಿಧಿಸಿದ ಶೇಕಡಾ 50 ರಷ್ಟು ದಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪರಿಶೀಲಿಸಿ ಮನ್ನಾ ಮಾಡಿದೆ. ಕರಾಚಿಯ ನ್ಯಾಶನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಲಾಹೋರ್ ಬ್ಲೂಸ್ ವಿರುದ್ಧ 2023-24ರ ರಾಷ್ಟ್ರೀಯ T20 ಕಪ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಆಜಂ ಖಾನ್, ಅಪರಾಧ ಎಸಗಿದ್ದಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಿ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿತ್ತು.
Advertisement
ಪಂದ್ಯದ ಸಮಯದಲ್ಲಿ ಅಂಪೈರ್‌ನ ಸೂಚನೆ ಅಥವಾ ನಿರ್ದೇಶನವನ್ನು ಅನುಸರಿಸಲು ಬ್ಯಾಟರ್ ಪದೇ ಪದೇ ವಿಫಲರಾಗಿದ್ದರು. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಪಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.4 ಅನ್ನು ಆಜಂ ಉಲ್ಲಂಘಿಸಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ
ಆಟಗಾರರು ಅಥವಾ ತಂಡದ ಅಧಿಕಾರಿಗಳ ಕ್ರಿಕೆಟ್ ಅಸೋಸಿಯೇಷನ್ ಹಾಗೂ PCB ಕ್ರಿಕೆಟ್ ಕಾರ್ಯಾಚರಣೆ ಇಲಾಖೆಯಿಂದ ಮುಂಚಿತವಾಗಿ ಅನುಮೋದಿಸದ ಹೊರತು ತಮ್ಮ ಉಪಕರಣಗಳಲ್ಲಿ ವೈಯಕ್ತಿಕ ಸಂದೇಶಗಳನ್ನು ಧರಿಸಲು, ಪ್ರದರ್ಶಿಸಲು ಅಥವಾ ರವಾನಿಸಲು ಆಟಗಾರರಿಗೆ ಅನುಮತಿ ಇರುವುದಿಲ್ಲ.