ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ ದಾಖಲೆಯನ್ನು ಪಾಕಿಸ್ತಾನದ ಯುವ ಆಟಗಾರ ಇಮಾಮ್-ಉಲ್-ಹಕ್ ಮುರಿದಿದ್ದಾರೆ.
ಕಪಿಲ್ ದೇವ್ ತಮ್ಮ 24 ನೇ ವಯಸ್ಸಿನಲ್ಲಿ 1983ರ ವಿಶ್ವಕಪ್ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ 175 ರನ್ ಸಿಡಿಸಿದ್ದರು. ಈ ಮೂಲಕ 150 ಕ್ಕೂ ಅಧಿಕ ರನ್ ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಆದರೆ ಸುದೀರ್ಘ 36 ವರ್ಷದ ನಂತರ ಈ ದಾಖಲೆಯನ್ನು ಇಮಾಮ್-ಉಲ್-ಹಕ್ ಅವರು ಅಳಿಸಿ ಹಾಕಿದ್ದಾರೆ.
Advertisement
Advertisement
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ನಡೆದ 3 ನೇ ಏಕದಿನ ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರು 151 ರನ್ (131 ಎಸೆತ, 16 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ತನ್ನ 23ನೇ ವಯಸ್ಸಿನಲ್ಲೇ ಈ ಸಾಧನೆಯನ್ನು ಮಾಡಿದ್ದಾರೆ.
Advertisement
ಪಂದ್ಯದಲ್ಲಿ ಇಮಾಮ್-ಉಲ್-ಹಕ್ ಅವರ 151 ರನ್‍ಗಳ ಭರ್ಜರಿ ಆಟದಿಂದ ಪಾಕಿಸ್ತಾನ 359 ರನ್‍ಗಳನ್ನು ಕಲೆಹಾಕಿತ್ತು. ಆದರೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೈರ್ ಸ್ಟೋವ್ (128 ರನ್, 93 ಎಸೆತ, 15 ಬೌಂಡರಿ, 5 ಸಿಕ್ಸರ್) ಅವರ ಶತಕದ ನೆರವಿನಿಂದ ಸುಲಭವಾಗಿ 6 ವಿಕೆಟ್‍ಗಳ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2 ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.