ಮಂಡ್ಯ/ದಕ್ಷಿಣ ಕನ್ನಡ/ಕೋಲಾರ/ವಿಜಯಪುರ: ಒಂದು ಕಡೆ `ಆಪರೇಷನ್ ಸಿಂಧೂರ’ದಿಂದ (Operation Sindoor) ಕಂಗೆಟ್ಟಿದ್ದ ಪಾಕಿಸ್ತಾನ ಗುರುವಾರ ಭಾರತ ಮೇಲೆ ಕ್ಷಿಪಣಿ ದಾಳಿ ಮಾಡುವ ಮೂಲಕ ಮತ್ತೆ ಬಾಲ ಬಿಚ್ಚಿದೆ. ಇನ್ನೊಂದು ಕಡೆ ಪಾಕ್ ಪ್ರೇಮಿಗಳು ಭಾರತದ ವಿರುದ್ಧ ಪೋಸ್ಟ್ ಹಾಕಿಕೊಂಡು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ.
ವಿಜಯಪುರದ (Vijayapura) ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪೋಸ್ಟ್ ಹಾಕಿಕೊಂಡಿದ್ದು, ನನ್ನ ಪಾಕಿಸ್ತಾನಿ ಸ್ನೇಹಿತರು, ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಎಂದು ದೇಶ ವಿರೋಧಿಯಾಗಿ ಬರೆದುಕೊಂಡಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಭವಿಷ್ಯದಲ್ಲಿ ನಾನು ಎಂದಿಗೂ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಾಳೆ.ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ, ಧಿಕ್ಕಾರ ಆಪರೇಷನ್ ಸಿಂಧೂರ ಎಂದು ಹ್ಯಾಷ್ ಟ್ಯಾಗ್ ಬಳಸಿಕೊಂಡು ಪೋಸ್ಟ್ ಹಾಕಿದ್ದಾಳೆ. ವಿರೋಧ ವ್ಯಕ್ತವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾಳೆ. ಮಂಡದಲ್ಲಿ ಜಾವಿದ್ ಎಂಬ ಯುವಕ, ಪ್ರಧಾನಿ ಮೋದಿ & ಇಮ್ರಾನ್ ಖಾನ್ ಇಬ್ಬರ ಕುರಿತು ಆಕ್ಷೇಪಾರ್ಹ ಫೋಟೋ ಹಾಕಿ ವಿಕೃತಿ ಮೆರೆದಿದ್ದ. ತಕ್ಷಣ ಎಚ್ಚೆತ್ತ ಕಿರುಗಾವಲು ಪೊಲೀಸರು ಜಾವಿದ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಕೋಲಾರದಲ್ಲಿ ಯೂಟ್ಯೂಬರ್, ಪಹಲ್ಗಾಮ್ ದಾಳಿ ಪೂರ್ವ ನಿಯೋಜಿತ. ಅದು ಕೇಂದ್ರ ಸರ್ಕಾರ ಹಿಂದೂ ಮತಗಳನ್ನ ಕ್ರೋಢೀಕರಿಸಲು ಮಾಡಿದ ಕುತಂತ್ರ ಎಂದು ವಿಡಿಯೋ ಹರಿಬಿಟ್ಟಿದ್ದ. ಆತನ ವಿರುದ್ಧ ಕೋಲಾರ ನಗರದ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆಧಾರ ರಹಿತ ಆರೋಪ ಮಾಡಿ ಅಶಾಂತಿ ಸೃಷ್ಟಿಸಿದ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ