ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

Public TV
2 Min Read
Lieutenant General Rajiv Ghai press meet

– ಫೋಟೊ, ವೀಡಿಯೋ ಸಾಕ್ಷಿ ಮುಂದಿಟ್ಟು ಸುಳ್ಳುಗಾರ ಪಾಕ್‌ಗೆ ತಿರುಗೇಟು

ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಉಗ್ರರಿಗೆ ಕೊಟ್ಟ ಏಟಿನ ಬಗ್ಗೆ ಫೋಟೊ ಸಾಕ್ಷಿಗಳ ಮೂಲಕ ಭಾರತೀಯ ಸೇನೆ (Indian Army) ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದೆ.

ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ನಲ್ಲಿ ಪಾಕಿಸ್ತಾನ ಸೇನೆಯು ಸುಮಾರು 35ರಿಂದ 40 ಸಿಬ್ಬಂದಿಯನ್ನು ಕಳೆದುಕೊಂಡಿದೆ. ಮೇ 7ರಿಂದ 10ರ ವರೆಗೆ ಈ ಕಾರ್ಯಾಚರಣೆ ನಡೆಯಿತು ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

ಪಾಕಿಸ್ತಾನಿ ನಾಗರಿಕರು ಅಥವಾ ಮಿಲಿಟರಿ ಸ್ಥಾಪನೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿಲ್ಲ. ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಸೇನೆ ಸ್ಪಷ್ಟಪಡಿಸಿದೆ.

ಉಗ್ರರ ನೆಲೆಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬೆನ್ನಲ್ಲೇ, ಮೇ 7 ರಂದು ಸಂಜೆ ಭಾರತದ ನಮ್ಮ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಾನವರಹಿತ ವೈಮಾನಿಕ ವಾಹನಗಳು (UAV), ಸಣ್ಣ ಡ್ರೋನ್‌ಗಳ ದಾಳಿ ನಡೆಸಿತು. ಅವುಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಮೂರು ಡ್ರೋನ್‌ಗಳು ದಾಳಿ ಮಾಡುವಲ್ಲಿ ಯಶಸ್ವಿಯಾದರೂ ಕಡಿಮೆ ಹಾನಿಯನ್ನುಂಟು ಮಾಡಿವೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

DGMO Pressmeet Operation Sindoor

ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದೆವು. ಆದರೆ, ಭಾರತದ ನಾಗರಿಕರು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಪಾಕಿಸ್ತಾನ ಗುರಿಯಾಗಿಸಿ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ನಮ್ಮ ಸೇನೆ ನೀಡಿದೆ. ಪ್ರತೀಕಾರವಾಗಿ ನಾವು ಲಾಹೋರ್‌ ಬಳಿ ಮತ್ತು ಗುಜ್ರಾನ್‌ವಾಲಾ ಬಳಿ ರೆಡಾರ್‌ ಸ್ಥಾಪನೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದೆ.

ಭಾರತದ ಕಾರ್ಯಾಚರಣೆ ಏನಿದ್ದರೂ ಭಯೋತ್ಪಾದಕರ ವಿರುದ್ಧವಷ್ಟೇ. ಪಾಕ್‌ ಜನರು ಮತ್ತು ಮಿಲಿಟರಿ ನೆಲೆ ನಮ್ಮ ದಾಳಿ ಉದ್ದೇಶ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

Share This Article