ಐಎಸ್‌ಐ ಮಾಜಿ ಮುಖ್ಯಸ್ಥ ಫೈಜ್ ಹಮೀದ್‌ ಬಂಧಿಸಿದ ಪಾಕ್ ಸೇನೆ

Public TV
1 Min Read
Faiz Hameed

ಇಸ್ಲಾಮಾಬಾದ್: ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ (Faiz Hameed) ಅವರನ್ನು ಸೇನೆ ಬಂಧಿಸಿದೆ.

ಪಾಕಿಸ್ತಾನ ಸೇನೆಯ (Pak Army) ಸಾರ್ವಜನಿಕ ಸಂಪರ್ಕ ವಿಭಾಗವು, ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶ ಅನುಸರಿಸಿ, ಲೆಫ್ಟಿನೆಂಟ್ ವಿರುದ್ಧ ಮಾಡಿದ ಟಾಪ್ ಸಿಟಿ ಕೇಸ್‌ನಲ್ಲಿನ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸೇನೆಯು ತನಿಖೆ ಕೈಗೊಂಡಿದೆ. ಪಾಕಿಸ್ತಾನ ಸೇನಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸುಳ್ಳು ವರದಿ ಪ್ರಕಟಿಸಿದ್ರೆ ಮಾಧ್ಯಮಗಳನ್ನು ಮುಚ್ಚುತ್ತೇವೆ: ಬಾಂಗ್ಲಾ ಸರ್ಕಾರ ಬೆದರಿಕೆ

pakistan army

ಪಾಕಿಸ್ತಾನದ ಖಾಸಗಿ ವಸತಿ ಯೋಜನೆಯಾದ ಟಾಪ್ ಸಿಟಿ, ಹಮೀದ್ ವಿರುದ್ಧ ಆರೋಪಗಳನ್ನು ಮಾಡಿದೆ. ಟಾಪ್‌ ಸಿಟಿ ಮಾಲೀಕ ಮೊಯೀಜ್ ಖಾನ್ ಅವರ ಕಚೇರಿಗಳು ಮತ್ತು ನಿವಾಸದ ಮೇಲೆ ಹಮೀದ್ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಹಮೀದ್ ವಿರುದ್ಧದ ಅಧಿಕಾರ ದುರುಪಯೋಗದ ಆರೋಪಗಳನ್ನು ತನಿಖೆ ಮಾಡಲು ಪಾಕಿಸ್ತಾನ ಸೇನೆಯು ಏಪ್ರಿಲ್‌ನಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಹಮೀದ್ ವಿರುದ್ಧದ ಅತ್ಯಂತ ಗಂಭೀರ ಸ್ವರೂಪದ ಆರೋಪಗಳನ್ನು ಗಮನಿಸದೆ ಬಿಡಲಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಇದನ್ನೂ ಓದಿ: ಕ್ಷಮಿಸಿ.. ಆದರೆ ನಾವು ನಿಯಮ ಪಾಲಿಸಲೇಬೇಕು: ಫೋಗಟ್‌ ಅನರ್ಹತೆ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಪ್ರತಿಕ್ರಿಯೆ

Share This Article