ನವದೆಹಲಿ: ಭಾರತದ ʻಆಪರೇಷನ್ ಸಿಂಧೂರʼಕ್ಕೆ (Operation Sindoor) ಬೆಚ್ಚಿ ಬಂಕರ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಪಾಕ್ ಸರ್ಕಾರ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಿದೆ.
ಭಾರತದೊಂದಿಗಿನ (India) ಇತ್ತೀಚಿನ ಸಂಘರ್ಷದಲ್ಲಿ ಸಶಸ್ತ್ರ ಪಡೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಹಾಗೂ ಅವರ ಕಾರ್ಯತಂತ್ರವನ್ನು ಗುರುತಿಸಿ ಜನರಲ್ ಅಸೀಮ್ ಮುನೀರ್‌ಗೆ ಬಡ್ತಿ ನೀಡಿರುವುದಾಗಿ ಪಾಕಿಸ್ತಾನ (Pakistan) ಸರ್ಕಾರ ಹೇಳಿಕೊಂಡಿದೆ. ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ಬೆದರಿ ಬಂಕರ್‌ನಲ್ಲಿ ಅಡಗಿದ್ದ ಅಸಿಮ್ ಮುನೀರ್!
ಜೊತೆಗೆ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಜಹೀರ್ ಬಾಬರ್ ಸಿಧು ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರವೂ ಸೇವೆಯಲ್ಲಿ ಉಳಿಸಿಕೊಳ್ಳಲು ಸಂಪುಟವು ಸರ್ವಾನುಮತದಿಂದ ನಿರ್ಧರಿಸಿದೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್!
ಅಸೀಮ್ ಮುನೀರ್ 2022ರ ನವೆಂಬರ್‌ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅವಧಿಯಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರೊಂದಿಗಿನ ಭಿನ್ನಾಭಿಪ್ರಾಯದ ವರದಿಯ ನಂತರ ಕೇವಲ 8 ತಿಂಗಳಲ್ಲೇ ಹೊರನಡೆಸಿದ್ದರು. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆ – ಬ್ರಿಟಿಷ್ ಕಾಶ್ಮೀರಿ ಪ್ರೊಫೆಸರ್ ಸಾಗರೋತ್ತರ ಪೌರತ್ವ ರದ್ದು