ಇಸ್ಲಾಮಾಬಾದ್: ಪಾಕಿಸ್ತಾನದ ಮತ್ತೊಂದು ಕಪಟ ನಾಟಕ ಬಯಲಾಗಿದ್ದು, ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಅಲ್ಲಿನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಸತ್ಯ ಒಪ್ಪಿಕೊಂಡಿದ್ದಾರೆ.
ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ನಮ್ಮಲ್ಲೇ ಇದ್ದಾನೆ. ಈಗ ಆತ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ. ಇಷ್ಟು ದಿನ ಮಸೂದ್ ಅಜರ್ ನಮ್ಮೊಂದಿಗಿಲ್ಲ. ಆತನ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಪಾಕಿಸ್ತಾನ ಹೇಳುತ್ತಿತ್ತು. ಆದ್ರೆ ಇದೀಗ ಪಾಕ್ ಸತ್ಯ ಒಪ್ಪಿಕೊಂಡಿದೆ. ಇದನ್ನೂ ಓದಿ: ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್
Advertisement
Advertisement
ಮಸೂದ್ ಅಜರ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಆತನಿಗೆ ಮನೆಯಿಂದ ಆಚೆ ಹೋಗುವುದಕ್ಕೂ ಆಗದಷ್ಟು ಹುಷಾರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮಸೂದ್ ಅಜರ್ ಬಂಧಿಸಲು ಪ್ರಬಲ ಸಾಕ್ಷ್ಯಗಳು ಬೇಕು. ಭಾರತದ ಬಳಿ ಸಾಕ್ಷಿಗಳಿದ್ದರೆ ಅವರು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಲಿ. ನಾವು ಅದರ ಮೂಲಕ ಜನರಿಗೆ ಮತ್ತು ನ್ಯಾಯಾಂಗಕ್ಕೆ ಅರ್ಥಮಾಡಿಸುತ್ತೇವೆ ಎಂದು ಖುರೇಷಿ ಹೇಳಿದ್ದಾರೆ.
Advertisement
2008 ರ ಮುಂಬೈ ದಾಳಿ, 2016 ರ ಪಠಾಣ್ ಕೋಟ್ ದಾಳಿಗಳ ಸಂಚುಕೋರ ಮಸೂದ್ ಅಜರ್ ಭಾರತದಲ್ಲಿ ನಡೆದ ಹಲವು ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದನು. ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿಯೂ ಆತನದ್ದೇ ಸಂಚಾಗಿತ್ತು. ಜೈಶ್ ಅದನ್ನು ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ಅದನ್ನು ಒಪ್ಪಿಕೊಂಡಿರಲಿಲ್ಲ. ಇದನ್ನೂ ಓದಿ: ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಬೆಂಬಲ: ಅಮೆರಿಕ
Advertisement
https://www.youtube.com/watch?v=meST7Z3VQq4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv