ಇಸ್ಲಾಮಾಬಾದ್: ಆಣೆಕಟ್ಟು ನಿರ್ಮಾಣ ನಿಧಿಗೆ 8 ಕೋಟಿ ರೂ. ನೀಡಿದ್ದ ವ್ಯಕ್ತಿಯೊಬ್ಬನನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ.
ಪಾಕಿಸ್ತಾನದ ಶೇಖ್ ಶಾಹಿದ್ ಎಂಬವರು ತಮ್ಮ 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆಣೆಕಟ್ಟು ನಿರ್ಮಾಣಕ್ಕಾಗಿ ನೀಡಿದ್ದರು. ಆದರೆ ಅವರ ಮನೆಯಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಶಾಹಿದ್ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಅವರ ಹೇಳಿಕೆಯನ್ನು ಪರಿಗಣಿಸಬೇಡಿ ಎಂದು ಕುಟುಂಬಸ್ಥರು ಕೋರ್ಟ್ ಮೆಟ್ಟಿಲು ಏರಿದ್ದರು.
Advertisement
ಈ ಕುರಿತು ಕೋರ್ಟ್‍ನಲ್ಲಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಶಾಹಿದ್ ಪತ್ನಿ, ನನ್ನ ಪತಿ ರೈತನಾಗಿದ್ದು, ಮಾನಸಿಕ ಅಸ್ವಸ್ಥರಾಗಿದ್ದಾರೆ. ನಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವೆ ಎಂದು ತಿಳಿಸಿದ್ದಾಳೆ. ಆಕೆಯ ಹೇಳಿಕೆಯನ್ನು ಆಲಿಸಿ ನ್ಯಾಯಾಧೀಶರು, ಶಾಹಿದ್ ಅವರು ಕುಟುಂಬಸ್ಥರ ಒಪ್ಪಿಗೆ ಇಲ್ಲದೆ ಆಸ್ತಿಯನ್ನು ದಾನ ಮಾಡಿದ್ದಾರೆ. ಜೊತೆಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದ್ದರಿಂದ ಆನುವಶೀಕವಾಗಿ ಶಾಹಿದ್ ಕುಟುಂಬಸ್ಥರಿಗೆ ಸಲ್ಲುತ್ತದೆ ಎಂದು ಆದೇಶ ನೀಡಿದ್ದಾರೆ.
Advertisement
ಶಾಹಿದ್‍ನನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸಿ, ಅದರ ವರದಿಯನ್ನು ಕೋರ್ಟ್ ಗೆ ಸಲ್ಲಿಸಬೇಕು ಅಂತಾ ನ್ಯಾಯಾಧೀಶರು, ಪೊಲೀಸರಿಗೆ ಸೂಚನೆ ನೀಡಿದ್ದಾರೆ. ವಿಚಾರಣೆ ವೇಳೆ ಶಾಹಿನ್ ಅವರ ಮೂರು ಮಕ್ಕಳು ಕೋರ್ಟ್ ಗೆ ಹಾಜರಾಗಿದ್ದರು.
Advertisement
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ನೀರಿನ ಸಮಸ್ಯೆ ನಿವಾರಿಸಲು ಡ್ಯಾಮ್ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ದಾನ ನೀಡುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಇಟ್ಟಿತ್ತು. ಹೀಗಾಗಿ ಅನೇಕ ಜನ ಡ್ಯಾಮ್ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews