ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

Public TV
3 Min Read
Pak women 2

– ನನ್ನ ಪತಿ ಹಿಂದೂ, ನಾನೂ ಹಿಂದೂ; ನಾನೀಗ ಭಾರತೀಯಳೆಂದು ಭಾವಿಸ್ತೇನೆ: ಸೀಮಾ
– ಪತ್ನಿಯನ್ನ ಒಂದುಗೂಡಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ ಸೀಮಾ ಪತಿ

ನವದೆಹಲಿ: ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ (30) ಮತ್ತು ಗ್ರೇಟರ್ ನೋಯ್ಡಾ ನಿವಾಸಿಗಳಾದ ಸಚಿನ್ ಮೀನಾ (25) ಜಾಮೀನು ಪಡೆದು ದೆಹಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ಪಾಕ್ ಮಹಿಳೆ (Pak Women) ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಪ್ರಾರಂಭಿಸಲು ಮುಂದಾಗಿದ್ದಾಳೆ.

PAKISTANI WOMAN 1

ಭಾರತಕ್ಕೆ ಅಕ್ರಮವಾಗಿ ತನ್ನ 4 ಮಕ್ಕಳೊಂದಿಗೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನ ಗ್ರೇಟರ್ ನೋಯ್ಡಾ ಪೊಲೀಸರು (Noida Police) ಜುಲೈ ಬಂಧಿಸಿದ್ದರು. ಶುಕ್ರವಾರ ಸ್ಥಳೀಯ ನ್ಯಾಯಾಲಯ (Local Court) ಈ ಮೂವರಿಗೂ ಜಾಮೀನು ನೀಡಿತು. ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು

ಜೈಲಿನಿಂದ ಬಿಡುಗಡೆಗೊಂಡ ನಂತರ ಹೊಸದಾಗಿ ದಾಂಪತ್ಯ ಜೀವನ ಶುರು ಮಾಡಲು ಈ ಜೋಡಿ ಮುಂದಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ಸೀಮಾ, ನನ್ನ ಪತಿ ಹಿಂದೂ, ಹಾಗಾಗಿ ನಾನೂ ಹಿಂದೂ. ನಾನೀಗ ಭಾರತೀಯಳು ಎಂದು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

PAKISTANI WOMAN

ಪಬ್‌ಜೀ ಪ್ರೇಮಕಥೆ ಶುರುವಾಗಿದ್ದು ಥ್ರಿಲ್ಲಿಂಗ್:
ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಕುತೂಹಲವಾಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, ದೇಶದಲ್ಲಿ ಕೋವಿಡ್ ವ್ಯಾಪಿಸಿದ ಸಂದರ್ಭದಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

Pak women

ಸೀಮಾ ಬಂದಿದ್ದು ಹೇಗೆ?
ನನ್ನದು ತುಂಬಾ ದೀರ್ಘ ಪ್ರಯಾಣವಾಗಿತ್ತು. ಮೊದಲ ಮದುವೆಯಾದ ನಂತರ ಕರಾಚಿಯಿಂದ ದುಬೈಗೆ ಹೋಗಿದ್ದೆ. ಅಲ್ಲಿಂದ ನೇಪಾಳಕ್ಕೆ ಹೋದ್ವಿ. ಕೊನೆಗೆ ಪೋಖ್ರಾ ದಾರಿ ಹಿಡಿಯುವ ಮುನ್ನ ಸಚಿನ್‌ನನ್ನ ಭೇಟಿಯಾಗಿದ್ದೆ. ನಂತರ ನಾನು ಪಾಕಿಸ್ತಾನಕ್ಕೆ, ಸಚಿನ್ ಭಾರತಕ್ಕೆ ಮರಳಿದ್ದರು. ಅದಾದ ಮೇಲೆ ಸೀಮಾ ಹಾಗೂ ಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಪಾಕಿಸ್ತಾನ ತೊರೆಯಲು ಮುಂದಾದಳು. ಸೀಮಾ ತನಗಿದ್ದ ಒಂದು ಫ್ಲಾಟ್ ಅನ್ನು 12 ಲಕ್ಷ ರೂ.ಗೆ (ಪಾಕಿಸ್ತಾನ ರೂಪಾಯಿಗಳಲ್ಲಿ) ಮಾರಾಟ ಮಾಡಿ, ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನ ಟಿಕೆಟ್ ಮತ್ತು ವೀಸಾ ವ್ಯವಸ್ಥೆ ಮಾಡಿಕೊಂಡಳು. ಕಳೆದ ಮೇ ತಿಂಗಳಲ್ಲಿ ದುಬೈ ಮೂಲಕ ನೇಪಾಳಕ್ಕೆ ಬಂದ ಸೀಮಾ, ಅಲ್ಲಿಂದ ಮೇ 13ರಂದು ಗ್ರೇಟರ್ ನೋಯ್ದಾಗೆ ಬಂದಿಳಿದಿದ್ದಳು. ಸಚಿನ್ ತನ್ನ ಪ್ರಿಯತಮೆಯ ಗುಟ್ಟು ಬಿಟ್ಟುಕೊಡದೇ ನೋಯ್ಡಾದಲ್ಲೇ ಬಾಡಿಗೆ ಮನೆ ಮಾಡಿ ಇರಿಸಿದ್ದ. ಈ ವಿಷಯ ಬೆಳಕಿಗೆ ಬಂದ ನಂತರ ಜುಲೈ 4ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು.

ಈ ನಡುವೆ ಸೌದಿ ಅರೇಬಿಯಾದಿಂದ ವೀಡಿಯೊ ಸಂದೇಶ ಕಳುಹಿಸಿರುವ ಸೀಮಾಳ ಪತಿ ಗುಲಾಮ್ ಹೈದರ್ ಅವರು ತನ್ನ ಪತ್ನಿಯೊಂದಿಗೆ ಒಂದಾಗಿ ಬಾಳೋದಕ್ಕೆ ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಸೀಮಾ, ಗುಲಾಮ್ ಹೈದರ್ ಬಳಿಗೆ ಹಿಂತಿರುಗಲು ಬಯಸಲ್ಲ, ಪಾಕಿಸ್ತಾನಕ್ಕೆ ಹಿಂತಿರುಗಿದ್ರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Web Stories

Share This Article