ಆಪರೇಷನ್ ಸಿಂಧೂರ ಶುರುವಾದ ಅರ್ಧ ಗಂಟೆಯ ನಂತರವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು: ಜೈಶಂಕರ್

Public TV
2 Min Read
S Jaishankar 2

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ (PoK) 9 ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿದ 30 ನಿಮಿಷಗಳ ನಂತರವೇ ಭಾರತ ಆಪರೇಷನ್‌ ಸಿಂಧೂರ (Operation Sindoor) ಮೊದಲ ಹಂತದ ಮಾಹಿತಿಯನ್ನು ನೀಡಲಾಯಿತು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಸಂಸದೀಯ ಸಭೆಗೆ ತಿಳಿಸಿದರು.

operation sindoor India intercepts Pakistans Fatah ballistic missile fired at Delhi

ವಿದೇಶಾಂಗ ಸಚಿವಾಲಯದ ಸಮಾಲೋಚನಾ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಸಚಿವರು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಪಾಕ್‌ ಸೇನೆಗೆ ಮೊದಲೇ ಮಾಹಿತಿ ನೀಡಿದೆ ಎಂಬ ಕಾಂಗ್ರೆಸ್ (Congress) ಆರೋಪವನ್ನು ತಳ್ಳಿಹಾಕಿದರು. 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರವೇ ಮಾಹಿತಿ ನೀಡಲಾಯಿತು. ಸತ್ಯ ತಿಳಿಯದೇ ತಪ್ಪು ನಿರೂಪಣೆ ಮಾಡುವುದು ʻಅಪ್ರಾಮಾಣಿಕತೆʼ ಎಂದು ʻಕೈʼ ನಾಯಕರಿಗೆ ತಿವಿದರು. ಇದನ್ನೂ ಓದಿ: ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

Pakistan Mirage Jet

ನಾವು ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಮತ್ತು ಮಿಲಿಟರಿಯ ಮೇಲೆ ಅಲ್ಲ. ಆದ್ದರಿಂದ ನೀವು ಈ ದಾಳಿಯಿಂದ ದೂರವಿರಬೇಕು ಮತ್ತು ಮಧ್ಯಪ್ರವೇಶಿಸಬಾರದು ಎಂದು ಪಾಕಿಸ್ತಾನಕ್ಕೆ ತಿಳಿಸಲಾಯಿತು. ಇಸ್ಲಾಮಾಬಾದ್ ಆರಂಭಿಸಿದ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ನಡುವೆ ನೇರ ಸಂವಹನದ ನಂತರ ಎರಡೂ ದೇಶಗಳ ನಡುವಿನ ಕದನ ವಿರಾಮ ಜಾರಿಗೆ ಬಂದಿತು ಎಂದು ಜೈಶಂಕರ್‌ ಹೇಳಿದರು.

ಅಲ್ಲದೇ ಪಾಕಿಸ್ತಾನದೊಂದಿಗೆ ತಾವು ಎಂದಿಗೂ ಮಾತನಾಡಿಲ್ಲ. ಅವರ ಕೋರಿಕೆಯ ಮೇರೆಗೆ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನ ದ್ವಿಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶಿಲ್ಲ ಎಂದು ಟ್ರಂಪ್‌ ಹಸ್ತಕ್ಷೇಪದ ಬಗ್ಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

DGMO Pressmeet Operation Sindoor

ಇದೇ ವೇಳೆ ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸಲು ಅಥವಾ ಮಾರ್ಪಡಿಸಲು ಸರ್ಕಾರ ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಒಪ್ಪಂದವು ಪ್ರಸ್ತುತ ಸ್ಥಗಿತಗೊಂಡಿದೆ. ಅದರ ನಿಯಮಗಳನ್ನು ಮರುಪರಿಶೀಲಿಸಲು ಅಥವಾ ಬದಲಾಯಿಸಲು ತಕ್ಷಣದ ಯೋಜನೆಗಳಿಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕರ್ನಾಟಕ ಸಿಜೆ ಸೇರಿ ಮೂವರ ಹೆಸರು ಸುಪ್ರೀಂ ಕೋರ್ಟ್ ಜಡ್ಜ್ ನೇಮಕಕ್ಕೆ ಶಿಫಾರಸು

Share This Article