ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಜಮ್ಮುವಿನಲ್ಲಿ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಆಗಮಿಸಿದ್ದರು. ಈ ವೇಳೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಕುರಿತು ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಯಾವಾಗಲೂ ಉಳಿಯುತ್ತದೆ. ಬಾಬಾ ಅಮರನಾಥ(ಶಿವನ ರೂಪ) ಮತ್ತು ಶಾರದಾ ಆರ್ಶಿವಾದ ಭಾರತದ ಮೇಲೆ ಇರಲು ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ
ಸಮರ್ಥ ಮತ್ತು ಆತ್ಮವಿಶ್ವಾಸದ ನವ ಭಾರತದ ಮೇಲೆ ದುಷ್ಟಕಣ್ಣುಗಳನ್ನು ಹಾಕುವ ಯಾರಿಗಾದರೂ ಸೂಕ್ತವಾದ ಪ್ರತ್ಯುತ್ತರವನ್ನು ನೀಡಲು ಸಜ್ಜಾಗುತ್ತಿದೆ. ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ಮಾಡುವುದು ಮಡಿದ ನಮ್ಮ ವೀರರಿಗೆ ಸೂಕ್ತವಾದ ಗೌರವವಾಗಿದೆ ಎಂದು ಕರೆ ಕೊಟ್ಟರು.
ಭಾನುವಾರ ಜಮ್ಮುವಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಅವರು ಭಾಗಿಯಾಗಿದ್ದು, ಸ್ವಾತಂತ್ರ್ಯದ ನಂತರ ದೇಶ ಸೇವೆಯಲ್ಲಿ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ: ಬಿಗಿ ಭದ್ರತೆ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ