ಕಾರವಾರ: ಯಕ್ಷಗಾನದ ಭಾಗವತಿಕೆ ಮೂಲಕ ಬಾಲೆಯೊಬ್ಬಳು ರಾಷ್ಟ್ರಪತಿಗೆ ಸ್ವಾಗತ ಕೋರಿದ್ದಳು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
Advertisement
ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರು ದೇಶದ ಪ್ರತಿಷ್ಠಿತ ರಾಷ್ಟ್ರಪತಿ ಸ್ಥಾನ ಅಲಂಕರಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಳಕೋಡ್ ಗ್ರಾಮದ ಬಾಲಕಿ ಚಿಂತನಾ ಹೆಗಡೆ ಯಕ್ಷಗಾನದ ಭಾಗವತಿಕೆ ಮೂಲಕ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್
Advertisement
Advertisement
‘ಹೆಜ್ಜೆ ಇಟ್ಟಿಹಳು ದ್ರೌಪದಿ..ರಾಷ್ಟ್ರಪತಿಯ ಭವನದಲ್ಲಿ..ಭಾರತ ಮಹಾಭಾರತವಾಗಲಿ..ಧರ್ಮರಾಯನ ನ್ಯಾಯಾಂಗ ಸಂವಿಧಾನ ವಿಹುದು..ಭೀಮ ಬಲದ ಸೇನಾಬಲ ವಿಹುದು’ ಎಂದು ಬಡಗು ತಿಟ್ಟು ಶೈಲಿಯಲ್ಲಿ ಚಿಂತನಾ ಹಾಡಿದ್ದಾಳೆ.
Advertisement
ಉಡುಪಿಯ ಅರವಿಂದ ಚಿಪ್ಳೂಣ್ಕರ್ ಅವರು ಈ ಹಾಡನ್ನು ರಚಿಸಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.