J&K ಚುನಾವಣೆಯಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಪಾಕ್‌ ರಕ್ಷಣಾ ಸಚಿವ

Public TV
2 Min Read
Khawaja Asif

– ಆರ್ಟಿಕಲ್‌ 370 ಮರುಸ್ಥಾಪಿಸುವ ಬಗ್ಗೆ ಕಾಂಗ್ರೆಸ್‌ – ಪಾಕ್‌ ಸರ್ಕಾರ ಒಂದೇ ಮನಸ್ಥಿತಿ ಹೊಂದಿದೆ ಎಂದ ಪಾಕ್‌ ಸಚಿವ

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್‌ (Khawaja Asif) ಹೇಳಿದ್ದಾರೆ.

ಆರ್ಟಿಕಲ್‌ 370 ರದ್ದಾದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಜೆ&ಕೆ ನಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, 61.3% ಮತದಾನವಾಗಿದೆ. ಈ ನಡುವೆ ಪಾಕ್‌ ರಕ್ಷಣಾ ಸಚಿವ ಮಾತನಾಡಿ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ (Congress And National Conference) ಮೈತ್ರಿ ಕೂಟ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.

jammu kashmir vote

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿ ಮರುಸ್ಥಾಪಿಸುವ ವಿಚಾರದಲ್ಲಿ ಶೆಹಬಾಜ್‌ ಷರೀಫ್‌ ಸರ್ಕಾರ ಮತ್ತು ಕಾಂಗ್ರೆಸ್‌ – ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಒಂದೇ ಅಭಿಪ್ರಾಯ ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುಜಿ ನೀಟ್ ಸೀಟು ರದ್ದತಿಗೆ ಅವಕಾಶ – ಸೆ.20ಕ್ಕೆ ಕೆಇಎಗೆ ಬರಲು ಅಭ್ಯರ್ಥಿಗಳಿಗೆ ಸೂಚನೆ

Jammu and Kashmir Election

ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ:
ಇನ್ನೂ ಪಾಕ್‌ ಸಚಿವರ ಹೇಳಿಕೆ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ, ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ, ಕಾಶ್ಮೀರದ ಬಗ್ಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ನಿಲುವನ್ನು ಅನುಮೋದಿಸುತ್ತದೆ. ಇಂತಹ ಹೇಳಿಕೆಗಳಿಂದ ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ ಯಾವಾಗಲೂ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದವರ ಪರವಾಗಿಯೇ ಇರುತ್ತದೆ ಎಂಬಹುದನ್ನು ಸೂಚಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕಿಂದು ಮೋದಿ ಭೇಟಿ – 30,000 ಕಾರ್ಯಕರ್ತರನ್ನುದ್ದೇಶಿಸಿ ಭಾಷಣ

vaishno devi temple jammu kashmir

ಜಮ್ಮು-ಕಾಶ್ಮೀರದಲ್ಲಿ ಶೇ.61 ಮತದಾನ:
ಜಮ್ಮು ಮತ್ತು ಕಾಶ್ಮೀರದ 7 ಜಿಲ್ಲೆಗಳ 24 ಕ್ಷೇತ್ರಗಳಲ್ಲಿ ಬುಧವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ.61 ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ವರದಿ ಬರುವ ಹೊತ್ತಿಗೆ ಕೆಲವು ಕೇಂದ್ರಗಳ ಮತದಾನ ದತ್ತಾಂಶ ಸಂಗ್ರಹವಾಗಬೇಕಿರುವುದರಿಂದ ಅಂತಿಮ ಮತದಾನದ ಶೇಕಡಾವಾರು ಹೆಚ್ಚಾಗಬಹುದು ಮತ್ತು ಇದು ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ ಎಂದು ಆಯೋಗ ಹೇಳಿದೆ. ಇದನ್ನೂ ಓದಿ: ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ – ಸಿಕ್ಕಿಬಿದ್ದ ಸೈಬರ್‌ ವಂಚಕ

ಜಮ್ಮುವಿನ ಚೆನಾಬ್ ಕಣಿವೆ ಪ್ರದೇಶದಲ್ಲಿ ಕಿಶ್ತ್ವಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡಾ 80.14 ರಷ್ಟು ಮತದಾನವಾಗಿದೆ, ನಂತರ ದೋಡಾ (71.34 ಶೇಕಡಾ) ಮತ್ತು ರಂಬಾನ್ (70.55 ಶೇಕಡಾ) ಮತದಾನವಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ದಕ್ಷಿಣ ಕಾಶ್ಮೀರದಲ್ಲಿ, ಕುಲ್ಗಾಮ್ ಜಿಲ್ಲೆ 62.46 ಪ್ರತಿಶತದೊಂದಿಗೆ ಮತದಾನದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಅನಂತನಾಗ್ ಜಿಲ್ಲೆ (57.84 ಪ್ರತಿಶತ), ಶೋಪಿಯಾನ್ ಜಿಲ್ಲೆ (55.96 ಪ್ರತಿಶತ) ಮತ್ತು ಪುಲ್ವಾಮಾ ಜಿಲ್ಲೆ (ಶೇ 46.65) ಎಂದು ಇಸಿ ತಿಳಿಸಿದೆ. ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

Share This Article