ಹಾವೇರಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ ನಂತರ ಪಾಕ್ ಪರ ಘೋಷಣೆ ಕೂಗಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಜಿಲ್ಲೆಯ ಸವಣೂರು ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಶಬ್ಬೀರ ಅಹಮ್ಮದ ಬಿಜಾಪುರಿ ಬಂಧಿತ ಆರೋಪಿ. ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮ್ಯಾಚ್‍ನಲ್ಲಿ ಪಾಕಿಸ್ತಾನ ಗೆದ್ದ ಬಳಿಕ ಶಬ್ಬೀರ್ ಪಾಕ್ ಪರ ಘೋಷಣೆ ಕೂಗಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಶಬ್ಬೀರನ್ನು ಬಂಧಿಸಿದ್ದಾರೆ.
Advertisement
ಸದ್ಯ ಬಂಧಿತ ಶಬ್ಬೀರನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement