ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ‌ʻಚೆನಾಬ್ʼ ಬಗ್ಗೆ ಪಾಕ್‌-ಚೀನಾದಿಂದ ಮಾಹಿತಿ ಸಂಗ್ರಹ

Public TV
1 Min Read
Chenab Bridge

ನವದೆಹಲಿ: ಚೀನಾದ ನಿರ್ದೇಶನದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಮತ್ತು ರಾಂಬನ್ ಜಿಲ್ಲೆಗಳನ್ನು ಸಂಪರ್ಕಿಸುವ ಚೆನಾಬ್ ರೈಲ್ವೆ (Chenab Railway Bridge) ಸೇತುವೆ ಬಗ್ಗೆ ಪಾಕಿಸ್ತಾನ ಮತ್ತು ಚೀನಾದ (Pakistan and China) ಗುಪ್ತಚರ ಸಂಸ್ಥೆ ಐಎಸ್‌ಐ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ವರದಿಯಾಗಿದೆ.

chenab railway bridge

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯು ಇತ್ತೀಚೆಗೆ ಪ್ರಾಯೋಗಿಕ ಕಾರ್ಯಾಚರಣೆ ಪ್ರಾರಂಭಿಸಿತು. ಈ ಸೇತುವೆ ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ದೇಶದ ಇತರ ಭಾಗಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಮೂಲಗಳ ಪ್ರಕಾರ ಪಾಕಿಸ್ತಾನ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳು ಈ ಸೇತುವೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿವೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್

china flag

ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆಯ ನಿರ್ಮಾಣ ಪೂರ್ಣಗೊಳಿಸಲು ಸರ್ಕಾರಕ್ಕೆ 20 ವರ್ಷಗಳು ಬೇಕಾಯಿತು. ಇದರ ನಿರ್ಮಾಣಕ್ಕೆ ಸಮಯದ ಮಿತಿ ಹೇರಿರಲಿಲ್ಲ. ಜಮ್ಮುವಿನ ಮೂಲಕ ಹಾದುಹೋಗುವ 272 ಕಿಮೀ ಉದ್ದದ ಸೇತುವೆ ಆಲ್-ವೆದರ್ ರೈಲ್ವೆ ವಿಭಾಗದ ಒಂದು ಭಾಗವಾಗಿದೆ, ಇದು ಅಂತಿಮವಾಗಿ ಕಾಶ್ಮೀರವನ್ನು ಸಂಪರ್ಕಿಸಲಿದೆ. ಇದನ್ನೂ ಓದಿ: ದೀಪಾವಳಿ ಆಚರಣೆ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ- ಒಂದೇ ಕುಟುಂಬದ ಮೂವರು ಬಲಿ

Pakistan

ಭಾರಿ ಹಿಮಪಾತದಿಂದ ಚಳಿಗಾಲದಲ್ಲಿ ರಸ್ತೆಗಳ ಬ್ಲಾಕ್ ಆಗಲಿದ್ದು, ರಸ್ತೆ ಮಾರ್ಗವಾಗಿ ಕಾಶ್ಮೀರ ಸಂಪರ್ಕಕ್ಕೆ ಸಮಸ್ಯೆಯಾಗಲಿದೆ. ಈ ಸೇತುವೆಯಿಂದ ಸರ್ವ ಕಾಲದಲ್ಲೂ ಕಾಶ್ಮೀರವನ್ನು ಸಂಪರ್ಕಿಸಬಹುದು. ಚೆನಾಬ್ ಸೇತುವೆಯೊಂದಿಗೆ, ತೊಂದರೆಗೊಳಗಾದ ಗಡಿ ಪ್ರದೇಶದಲ್ಲಿ ಭಾರತವು ಕಾರ್ಯತಂತ್ರದ ಪ್ರಯೋಜನವನ್ನು ಪಡೆಯುತ್ತದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ತೊಳಲಾಟವನ್ನು ಬಹಿರಂಗವಾಗಿ ಹೇಳಿದ ಡಿಕೆಶಿಗೆ ಅಭಿನಂದನೆ: ವಿ.ಸೋಮಣ್ಣ ವ್ಯಂಗ್ಯ 

Share This Article