ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜಕೀಯ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದ ಸೇನಾನೆಲೆಯಲ್ಲಿ ಭಾರೀ ಸ್ಪೋಟ ಕಂಡುಬಂದಿದ್ದು, ಸಂಚಲನ ಸೃಷ್ಟಿಸಿದೆ.
ಉತ್ತರ ಪಾಕಿಸ್ತಾನದ ಭಾಗದ ಸಿಯಾಲ್ಕೋಟ್ ನಗರದಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದ್ದು, ಸದ್ಯ ಸ್ಪೋಟಗೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ
Advertisement
Pakistan: Massive explosion heard in Sialkot Cannt area
Read @ANI Story | https://t.co/GnP6fxOuU9#Pakistan #Sialkot pic.twitter.com/XBJ2RvbQbE
— ANI Digital (@ani_digital) March 20, 2022
Advertisement
ಪಂಜಾಬ್ ಪ್ರಾಂತ್ಯದ ನಿಷೇಧಿತ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್
Advertisement
ಉತ್ತರ ಪಾಕಿಸ್ತಾನದ ಸಿಯಾಲ್‍ಕೋಟ್ ಸೇನಾ ನೆಲೆಯಲ್ಲಿ ಬಹು ಸ್ಫೋಟ ಉಂಟಾಗಿದ್ದು, ಪ್ರಾಥಮಿಕ ಮಾಹಿತಿಗಳು ಇದು ಮದ್ದುಗುಂಡುಗಳ ಸಂಗ್ರಹ ಪ್ರದೇಶವಾಗಿದೆ. ದೊಡ್ಡ ಬೆಂಕಿ ಹೊತ್ತಿ ಉರಿಯುತ್ತಿದೆ. ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.