ನವದೆಹಲಿ: ತನ್ನ ಮೇಲೆ ಭಾರತ ಬಾಲಾಕೋಟ್ (Balakot Air Strike) ಮೇಲೆ ವಾಯುದಾಳಿ ನಡೆಸಿದಂತೆ ಈ ಬಾರಿಯೂ ದಾಳಿ ನಡೆಸಬಹುದು ಎಂಬ ಭೀತಿ ಪಾಕಿಸ್ತಾನಕ್ಕೆ (Pakistan) ಬಂದಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.
ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನ ವಾಯುಸೇನೆ ತನ್ನ ಪ್ರಮುಖ ವಿಮಾನಗಳನ್ನು ಭಾರತದ (India) ಗಡಿಯ ನೆಲೆಗಳಿಗೆ ಸಾಗಿಸುತ್ತಿರುವ ವಿಚಾರ ಫ್ಲೈಟ್‌ರಾಡರ್‌ನಲ್ಲಿ ಗೊತ್ತಾಗಿದೆ.
ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ವಿಮಾನಗಳು ಕರಾಚಿಯ ದಕ್ಷಿಣ ವಾಯು ಕಮಾಂಡ್‌ನಿಂದ ಉತ್ತರದ ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ನೆಲೆಗಳಿಗೆ ಸಂಚರಿಸುತ್ತಿರುವ ಫ್ಲೈಟ್‌ರಾಡರ್ 24 ರ ಸ್ಕ್ರೀನ್‌ಶಾಟ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಹಿಳೆಯರಿಂದ ಪುರುಷರನ್ನು ಬೇರ್ಪಡಿಸಿ ಹತ್ಯೆ – 20 ನಿಮಿಷದಲ್ಲಿ ನರಮೇಧ ಮಾಡಿದ್ದು ಹೇಗೆ?
🚨Flight data shows Pakistan deploying military assets to bases near J&K
1. PAF198, a Lockheed C-130E Hercules transport aircraft.
2. PAF101, a smaller Embraer Phenom 100 jet, is often used for VIP transport or intelligence operations.
These aircraft depart from the Southern… pic.twitter.com/Yhtsw5bsrA
— Geo View (@theGeoView) April 23, 2025
ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ವಾಯುನೆಲೆಗಳು ಭಾರತೀಯ ಗಡಿಗಳಿಗೆ ಹತ್ತಿರದಲ್ಲಿವೆ. PAF198 ಲಾಕ್‌ಹೀಡ್ C-130E ಹರ್ಕ್ಯುಲಸ್ ಸಾರಿಗೆ ವಿಮಾನವಾಗಿದ್ದರೆ PAF101 ಸಣ್ಣ ಎಂಬ್ರೇರ್ ಫೆನಮ್ 100 ಜೆಟ್ ಅನ್ನು ಸಾಮಾನ್ಯವಾಗಿ ವಿಐಪಿ ಸಾರಿಗೆ ಅಥವಾ ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಇದನ್ನೂ ಓದಿ: ಐಷಾರಾಮಿ ಕಾರುಗಳಲ್ಲಿ ಪ್ರಯಾಣ, ಪಾಕ್ ಸೇನೆಯ ನಂಬಿಕಸ್ಥನೇ ದಾಳಿಯ ಮಾಸ್ಟರ್ ಮೈಂಡ್!
2019ರ ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಹುತಿ ಉಗ್ರನ ದಾಳಿ 40 ಸೈನಿಕರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಫೆಬ್ರವರಿ 26 ರಂದು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿತ್ತು.