– ಮಂಜುನಾಥ್ ಹತ್ಯೆ ಬಳಿಕ ಪತ್ನಿಗೆ ಮೋದಿಗೆ ಹೇಳು ಎಂದಿದ್ದ ಉಗ್ರ
ನವದೆಹಲಿ: ಪಾಕ್‌ನ ಉಗ್ರ ನೆಲೆಗಳ ಮೇಲೆ ನಡೆದ ಆಪರೇಷನ್ ಸಿಂಧೂರ (Operation Sindoor) ಬಳಿಕ ಸಾಮಾಜಿಕ ಜಾಲತಾಣದಲ್ಲಿ `TELL MODI – I TOLD MODI’ ಕಾರ್ಟೂನ್ ವೈರಲ್ ಆಗುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ಶಿವಮೊಗ್ಗ (Shivamogga) ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಉಗ್ರರು ಹತ್ಯೆಗೈದು, ಅವರ ಪತ್ನಿ ಬಳಿ ಮೋದಿಗೆ ಹೇಳು ಎಂದಿದ್ದರು. ಇದೀಗ 9 ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ, ಧ್ವಂಸ ಮಾಡಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ತಕ್ಕ ಉತ್ತರ ನೀಡಿದೆ. ಇದರ ಬೆನ್ನಲ್ಲೇ ʻಮೋದಿಗೆ ಹೇಳುʼ ಎಂದಿರುವುದು ಮತ್ತು ನಾನು ʻಮೋದಿಗೆ ಹೇಳಿದ್ದೆʼ ಎನ್ನುವ ಕಾರ್ಟೂನ್ ಭಾರತೀಯರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಉಗ್ರರ ಮೇಲಿನ ದಾಳಿಗೆ ಭಾರತದ ಪ್ರಜೆಗಳ ಮೇಲೆ ಗುಂಡು – 7 ಸಾವು
ಮಂಜುನಾಥ್ ಕುಟುಂಬ ಮಗನಿಗೆ ಬೇಸಿಗೆ ರಜೆ ಸಿಕ್ಕ ಹಿನ್ನೆಲೆಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿತ್ತು. ದಾಳಿಯಿಂದ ಬದುಕುಳಿದಿರುವ ಅವರ ಪತ್ನಿ ಪಲ್ಲವಿ, ಮನಕಲುಕುವ ಕ್ಷಣಗಳನ್ನು ʻಪಬ್ಲಿಕ್ ಟಿವಿʼಗೆ ವಿವರಿಸಿದ್ದರು. ನಾನು, ನನ್ನ ಪತ್ನಿ, ಮಗ ಕಾಶ್ಮೀರಕ್ಕೆ ಹೋಗಿದ್ದೆವು. ನಾವು ಪಹಲ್ಗಾಮ್‌ನಲ್ಲಿದ್ದಾಗ ಮಧ್ಯಾಹ್ನದ ವೇಳೆಗೆ ದಾಳಿ ನಡೆಯಿತು. ನನ್ನ ಪತಿಯನ್ನ ಕಣ್ಣಮುಂದೆಯೇ ಕೊಂದುಬಿಟ್ಟರು. ಅದನ್ನ ನೆನೆಸಿಕೊಂಡ್ರೆ ಈಗಲೂ ಕೆಟ್ಟ ಕನಸಿನಂತೆ ಭಾಸವಾಗ್ತಿದೆ ಎಂದು ಭಾವುಕರಾಗಿದ್ದರು.
ಅವರು ದಾಳಿ ಮಾಡಿದ್ದು ನೋಡಿದ್ರೆ, ಹಿಂದೂಗಳನ್ನ ಗುರಿಯಾಗಿಸಿಕೊಂಡೇ ಬಂದಂತೆ ಇತ್ತು. ಮೂರರಿಂದ ನಾಲ್ಕು ಜನ ನಮ್ಮ ಮೇಲೆ ದಾಳಿ ಮಾಡಿದ್ರು. ನಾನು ಅವರಿಗೆ ಹೇದರದೆ. ನನ್ನ ಪತಿಯನ್ನ ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಆಗ ಅವರಲ್ಲಿದ್ದ ಒಬ್ಬ ʻನಾನು ನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನು ಹೇಳು ಎಂದಿದ್ದʼ ಎಂಬುದಾಗಿ ವಿವರಿಸಿದ್ದರು.
ಎಂದು ಹೇಳಿದ್ದರು.
ನನ್ನ ಮಗ ಏಯ್ ನಾಯಿ… ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ.. ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು ಎಂದು ಹೋದ. ಗಂಡಸರಿಗೆ ಮಾತ್ರ ಹೊಡೆದರು. ಹೆಂಗಸರು, ಮಕ್ಕಳಿಗೆ ಏನೂ ಆಗಿಲ್ಲ ಎಂದಿದ್ದರು. ಇದನ್ನೂ ಓದಿ: ಕಸಬ್, ಡೇವಿಡ್ ಹೆಡ್ಲಿ ತರಬೇತಿ ಪಡೆದ ಕ್ಯಾಂಪ್ ಧ್ವಂಸ: ಭಾರತ