– ಮೊದಲ ಒಂದೂವರೆ ದಿನದ ಆರಾಧನೆಗೆ ಅವಕಾಶ
ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಆನೆಗುಂದಿ (Anegundi) ಬಳಿಯ ನವವೃಂದಾವನ ನಡುಗಡ್ಡೆಯಲ್ಲಿ ನೆಲೆಸಿರುವ ಶ್ರೀಪದ್ಮನಾಭ ತೀರ್ಥರ ಆರಾಧನೆಯನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠ ನಡೆಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ.
ಮೊದಲ ಒಂದೂವರೆ ದಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೂರ್ವಿಕ ಗುರುಗಳಾದ ಶ್ರೀಪದ್ಮನಾಭ ತೀರ್ಥರ ಆರಾಧನೆಯ ನಡೆಸುವಂತೆ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಅನುಮತಿ ನೀಡಿದೆ.ಇದನ್ನೂ ಓದಿ: ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ
ಶ್ರೀಪದ್ಮನಾಭ ತೀರ್ಥರ ಆರಾಧನೆ ನಿಮಿತ್ತ ನ.26ರಂದು ಸುದೀರ್ಘ ಚರ್ಚೆ ನಡೆಸುವ ಮೂಲಕ ಅವಕಾಶವನ್ನು ನೀಡಿದೆ. ನ.29ರಂದು ಪೂರ್ತಿ ದಿನ ಪೂರ್ವರಾಧನೆ ಹಾಗೂ ನ.30ರಂದು ಮದ್ಯರಾಧನೆ ಮಧ್ಯಾಹ್ನದವರೆಗೆ ಅವಕಾಶವನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿದೆ. ಸುಪ್ರೀಂ ಕೋರ್ಟ್‌ನ ಆದೇಶದವರೆಗೂ ಈ ಆದೇಶ ಚಾಲ್ತಿಯಲ್ಲಿರುತ್ತದೆ.
ಉತ್ತರಾಧಿ ಮಠದಿಂದ ನ.30 ಮಧ್ಯಾಹ್ನದಿಂದ ಡಿ.1 ರವರೆಗೆ ಆರಾಧನೆ ನೆರವೇರಿಸಲಾಗುತ್ತದೆ.ಇದನ್ನೂ ಓದಿ: ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮರಿ ಸಾವು