ಪುಣೆ: ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ಪುಣೆಯಲ್ಲಿ ನಿಧನರಾಗಿದ್ದಾರೆ.
ಸಿಂಧೂತಾಯಿ ಸಪ್ಕಾಲ್(74) ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ 8.10ಕ್ಕೆ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಮಂಗಳವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಹಿನ್ನೆಲೆ: ಮಹಾರಾಷ್ಟ್ರದ ವಾರ್ಧಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಸಿಂಧೂತಾಯಿ, ಹುಟ್ಟಿನಿಂದಲೇ ತಾರತಮ್ಯಕ್ಕೆ ಒಳಗಾಗಿದ್ದರು. ಸಿಂಧೂತಾಯಿಯ ತಾಯಿ ಶಿಕ್ಷಣದಿಂದ ದೂರವಾಗಿದ್ದರು. ದನ ಮೇಯಿಸಲು ಹೊರಗೆ ಹೋಗುತ್ತಾಳೆ ಎನ್ನುವ ನೆಪದಲ್ಲಿ ಅವರ ತಾಯಿಗೆ ಯಾರಿಗೂ ತಿಳಿಯದಂತೆ ಶಾಲೆಗೆ ಕಳುಹಿಸುತ್ತಿದ್ದರು. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ
Advertisement
ಮಾಯಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಪ್ಕಾಲ್, ಪುಣೆಯಲ್ಲಿ ಸನ್ಮತಿ ಬಾಲ ನಿಕೇತನ ಸಂಸ್ಥೆ ಅನಾಥಾಶ್ರಮ ಹಾಗೂ ಪ್ರಭುನೆ ಪುನರುತ್ತನ್ ಸಮರಸತಾ ಗುರುಕುಲಂ ಎಂಬ ಎನ್‍ಜಿಒ ನಡೆಸುತ್ತಿದ್ದರು. ಎನ್‍ಜಿಒ ಪಾರ್ಧಿ ಸಮುದಾಯ ಮತ್ತು ಅವರ ಮಕ್ಕಳ ಉನ್ನತಿಗಾಗಿ ಕೆಲಸ ಮಾಡುತ್ತದೆ. ಅವರು ಪಾರ್ಧಿ ಮಕ್ಕಳಿಗಾಗಿ ಶಾಲೆ ಮತ್ತು ಹಾಸ್ಟೆಲ್ ಸಹ ನಡೆಸುತ್ತಿದ್ದಾರೆ.
Advertisement
ಸಾಮಾಜಿಕ ಕಾರ್ಯ: ಸಪ್ಕಾಲ್ ತನ್ನ ಸುದೀರ್ಘ ವೃತ್ತಿಜೀವನದಲ್ಲಿ 1,000ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ಪಡೆದ್ದರು. ಸಾಮಾಜಿಕ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2010ರಲ್ಲಿ, ಮಹಾರಾಷ್ಟ್ರದಲ್ಲಿ ಮಿ ಸಿಂಧುತೈ ಸಪ್ಕಲ್ ಬೋಲ್ತೆ ಎಂಬ ಶೀರ್ಷಿಕೆಯ ಸಪ್ಕಾಲ್‍ನ ಮರಾಠಿ ಜೀವನಚರಿತ್ರೆ ಬಯೊಪಿಕ್ ಬಿಡುಗಡೆಯಾಗಿದೆ.
Dr. Sindhutai Sapkal will be remembered for her noble service to society. Due to her efforts, many children could lead a better quality of life. She also did a lot of work among marginalised communities. Pained by her demise. Condolences to her family and admirers. Om Shanti. pic.twitter.com/nPhMtKOeZ4
— Narendra Modi (@narendramodi) January 4, 2022
ಮೋದಿ ಟ್ವೀಟ್: ಡಾ.ಸಿಂಧೂತಾಯಿ ಸಪ್ಕಲ್ ಅವರು ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಗಾಗಿ ಸ್ಮರಣೀಯರು. ಅವರ ಪ್ರಯತ್ನದಿಂದಾಗಿ, ಅನೇಕ ಮಕ್ಕಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಿದ್ದರೆ. ಅವರ ನಿಧನದ ಸುದ್ದಿಯಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಬರೆದುಕೊಂಡು ಸಂತಾಪವನ್ನು ಸೂಚಿಸಿದ್ದಾರೆ.