ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ

Public TV
1 Min Read
padma awards 3

ನವದೆಹಲಿ: 2023ನೇ ಸಾಲಿನ ಪದ್ಮ ಪ್ರಶಸ್ತಿಗಾಗಿ ಆನ್‍ಲೈನ್ ನಾಮನಿರ್ದೇಶನ ಮತ್ತು ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.

2023ರ ಪದ್ಮ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಮಾಡಲು ಆನ್‍ಲೈನ್‍ನಲ್ಲಿ ಮೇ 1ರಿಂದ ಮುಕ್ತವಾಗಿ ತೆರೆಯಲಾಗಿತ್ತು. ಈಗ ಗೃಹ ಸಚಿವಾಲಯವು, 2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನ ಎಂದು ತಿಳಿಸಿದೆ. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣ 

padma awards 2

ಈ ವೇಳೆ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ ಶಿಫಾರಸುಗಳನ್ನು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್‍ನ ಅಧಿಕೃತ ವೆಬ್‍ಸೈಟ್-https://awards.gov.in ನಲ್ಲಿ ಮಾತ್ರ ಆನ್‍ಲೈನ್‍ನಲ್ಲಿ ಸ್ವೀಕರಿಸಲಾಗುವುದು ಎಂದು ಅಧಿಕೃತವಾಗಿ ತಿಳಿಸಿದೆ.

ಪದ್ಮ ಪ್ರಶಸ್ತಿ ಎಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 1954ರಲ್ಲಿ ಸ್ಥಾಪನೆಯಾದ ಪದ್ಮ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಹಾಗೂ ಅವರನ್ನು ಸಮಾಜಕ್ಕೆ ಪರಿಚಯಿಸುವ ಮಹನ್ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತೆ ಬರಲಾಗಿದೆ.

padma awards

ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆಗಳು, ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅನನ್ಯ ಸಾಧನೆ ಮತ್ತು ಸೇವೆ ನೀಡಿರುವ ಗಣ್ಯರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದನ್ನೂ ಓದಿ: ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು 

Share This Article
Leave a Comment

Leave a Reply

Your email address will not be published. Required fields are marked *