-ನನ್ನ ಕೇಳಿ ಹೋಗಬೇಕಿತ್ತು
-ರಾತ್ರಿ ಯಾಕೆ ಹೋದ್ರು?
ಬೆಂಗಳೂರು: ಈ ರೀತಿಯ ಘಟನೆಗಳು ನಡೆಯಬಾರದಿತ್ತು. ಗಲಾಟೆ ನಡೆಸಿದವರ ಬಗ್ಗೆ ಖಂಡಿತ ಕಠಿಣ ಕ್ರಮ ಜರುಗಿಸಬೇಕು. ರಾತ್ರಿ ವೇಳೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಪಾದರಾಯನಪುರಕ್ಕೆ ಹೋಗಬೇಕು. ಬೆಳಗ್ಗೆ ಹೋಗಿದ್ದು ತಪ್ಪು ಎಂದು ಬಿಬಿಎಂಪಿ ಮೇಲೆ ಶಾಸಕ ಜಮೀರ್ ಅಹಮದ್ ಗೂಬೆ ಕೂರಿಸಿದ್ದಾರೆ.
ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಕೇಳಿ ಬೇಕಿತ್ತು. ಡೇ ಟೈಮ್ ನಲ್ಲಿ ಶಂಕಿತರನ್ನು ಕರೆದುಕೊಂಡು ಹೋಗುವಂತೆ ಕಮಿಷನರ್ ಗೆ ಸಹ ಹೇಳಿದ್ದೆ. ರಾತ್ರಿ ಹೋಗುವ ಅಗತ್ಯವೇನಿತ್ತು? ಬಿಬಿಎಂಪಿ ಕಮಿಷನರ್ ಅನಿಲ್ ಜೊತೆ ಸಹ ಮಾತನಾಡಿದ್ದೇನೆ. ಭಾನುವಾರ ಬೆಳಗ್ಗೆಯಿಂದ ನನ್ನ ಪಿಎ ಕಾಯ್ತಾ ಕುಳಿತಿದ್ದರು. ಹೋಟೆಲ್ ಸಿಗದ ಹಿನ್ನೆಲೆಯಲ್ಲಿ ರಾತ್ರಿ ಹೋಗಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದಾರೆ. ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ.
ಬಿಬಿಎಂಪಿ ಕಮೀಷನರ್ ಏನ್ ಹೇಳಿದ್ದಾರೆ ಅಂತ ಗೊತ್ತಿಲ್ಲ. ಸೀಲ್‍ಡೌನ್ ಆಗಿದ್ದರಿಂದ ಜನ ಟೆನ್ಷನ್ ನಲ್ಲಿದ್ದಾರೆ. ಹಾಗಾಗಿ ಅಧಿಕಾರಿಗಳು ನನ್ನ ಗಮನಕ್ಕೆ ತರದೇ ಹೋಗಬಾರದಿತ್ತು. ಕೆಲವರು ಮಾಡಿದ ತಪ್ಪಿನಿಂದ ಇಡೀ ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಗಲಾಟೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನೇ ಹೇಳುತ್ತಿದ್ದೇನೆ. ಇಷ್ಟು ದಿನ ಶಾಂತವಾಗಿದ್ದ ಪ್ರದೇಶದಲ್ಲಿ ಗಲಾಟೆ ಹೇಗೆ ನಡೆಯಿತು ನನಗೆ ಶಾಕ್ ಆಗಿದೆ ಎಂದರು.