-ಚೆಕ್‍ಪೋಸ್ಟ್ ಒಡೆದು ಹಾಕಿ ನೂರಾರು ಜನ ಗಲಾಟೆ
-ಸ್ಥಳೀಯರ ಗೂಂಡಾಗಿರಿಗೆ ಕಾಲ್ಕಿತ್ತ ಪೊಲೀಸರು
ಬೆಂಗಳೂರು: ಪಾದರಾಯನಪುರದಲ್ಲಿ ಪುಂಡರ ಹಾವಳಿ ಮುಂದುವರಿದಿದ್ದು, ಚೆಕ್‍ಪೋಸ್ಟ್ ಒಡೆದು ಹಾಕಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪಾದರಾಯನಪುರದ 58 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಸಿಬ್ಬಂದಿ ಹೋಗಿದ್ದರು.
Advertisement
ಇಂದು ರಾತ್ರಿಯಾಗುತ್ತಿದ್ದಂತೆ ಪಾದರಾಯನಪುರದ ಕೆಲ ಪುಂಡರು ರೌಡಿಗಳ ರೀತಿಯಲ್ಲಿ ವರ್ತಿಸಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರೋದನ್ನ ಗಮನಿಸಿದ ಪುಡಿ ರೌಡಿಗಳು ದಾಂಧಲೆಯನ್ನು ನಡೆಸಿದ್ದಾರೆ. ಏಕಾಏಕಿ ವಾಹನಗಳ ಸಮೇತ ಗುಂಪು ಕಟ್ಟಿಕೊಂಡು ಬಂದ ಜನರನ್ನ ನೋಡಿದ ಪೊಲೀಸರು ಒಂದು ಹೆಜ್ಜೆಯನ್ನು ಹಿಂದೆ ಇಟ್ಟಿದ್ದಾರೆ.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಶಾ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರ ಆಗಿದ್ದರಿಂದ ಪೊಲೀಸರು ಸಹ ಕಡಿಮೆ ಸಂಖ್ಯೆಯಲ್ಲಿದ್ದರು. ಈ ರೀತಿ ಘಟನೆ ನಡೆದಿದ್ದು, ಇದೇ ಮೊದಲು ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.
Advertisement