ಬೆಂಗಳೂರು: ಪಾದರಾಯನಪುರ ಗಲಾಟೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಒಟ್ಟು 54 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮಾಹಿತಿ ನೀಡಿದ್ದಾರೆ.
Advertisement
ಗಾಂಜಾ ಲೇಡಿ ಫಿರೋಜಾಳ ಕೈವಾಡ ಇದೆಯಾ ಎಂಬ ಅನುಮಾನಗಳು ಮೂಡಿವೆ. ಏಕಾಏಕಿ ನೂರಾರ ಜನರ ಗುಂಪಿನಲ್ಲಿ ಮಹಿಳೆಯೊಬ್ಬಳು ಕಾಣಿಸಿಕೊಂಡಿದ್ದಳು. ಮಹಿಳೆ ಸೀಲ್‍ಡೌನ್ ಮಾಡಿದ್ದ ಮಾರ್ಗಗಳನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಫಿರೋಜಾ ಗಾಂಜಾ ದಂಧೆ ನಡೆಸುತ್ತಿದ್ದು, ಈಕೆಯೇ ಮುಂದೆ ನಿಂತು ಶೀಟ್ ಗಳನ್ನು ಕೀಳಿಸಿದ್ದಾಳೆ. ಗಾಂಜಾ ಪುಂಡರನ್ನು ಒಂದೆಡೆ ಸೇರಿಸಿ ಈಕೆಯೇ ಗಲಾಟೆಗೆ ಪ್ರಚೋದನೆ ನೀಡಿದಳಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
Advertisement
Advertisement
ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಗಲಾಟೆಯಲ್ಲಿ ಭಾಗಿಯಾದ್ದ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ 54 ಜನರನ್ನು ಬಂಧಿಸಿ, ಇಂದು ಕೋರ್ಟ್ ಮುಂದೆ ಹಾಜರುಪಡಿಸುತ್ತೇವೆ. ಕೊರೊನಾ ಶಂಕಿತರು ಯಾರು ಎಂಬುದರ ಬಗ್ಗೆ ವೈದ್ಯರ ಬಳಿ ಮಾಹಿತಿ ಇದೆ. ಇಂದು ಆರೋಗ್ಯ ಸಿಬ್ಬಂದಿ ಬಂದು ಕೊರೊನಾ ಶಂಕಿತರನ್ನು ಶಿಫ್ಟ್ ಮಾಡ್ತಾರೆ. ಬಂಧಿತರ ಹೆಸರನ್ನು ಆದಷ್ಟು ಬೇಗ ಹೇಳುತ್ತೇವೆ ಎಂದು ತಿಳಿಸಿದರು.
Advertisement
ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿದ್ದ 58 ಜನರನ್ನು ಶಿಫ್ಟ್ ಮಾಡಲು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಕೆಲವರು ಇಲ್ಲಿಯೇ ಕ್ವಾರಂಟೈನ್ ಮಾಡಿ. ಬೇರೆ ಕಡೆ ಕರೆದುಕೊಂಡು ಹೋಗದಂತೆ ತಡೆದಿದ್ದಾರೆ. ಸಿಬ್ಬಂದಿ ಕ್ವಾರಂಟೈನ್ ಗೆ ಜನರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಗಲಾಟೆ ನಡೆಸಿದ್ದಾರೆ ಎಂದು ಸೌಮೇಂದು ಮುಖರ್ಜಿ ಹೇಳಿದ್ದಾರೆ.