ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಸಿಂಗಾರಗೊಳ್ಳುತ್ತಿದೆ. ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನ ಫಿಕ್ಸ್ ಆಗಿದ್ದು, ಅಮಂತ್ರಣ ಪತ್ರಿಕೆ ಹಂಚಿಕೆ ಕಾರ್ಯ ಶುರುವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಕ್ರೀಡಾಕ್ಷೇತ್ರದ ಗಮನವನ್ನೂ ಸೆಳೆಯಲಾಗಿದೆ. ಟೀಂ ಇಂಡಿಯಾದ ಉತ್ತಮ ಬೌಲರ್‌ಗಳ ಪೈಕಿ ವೆಂಕಟೇಶ್ ಪ್ರಸಾದ್ ಸಹ ಒಬ್ಬರು. ಭಾರತದ ಪರ ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದು ಸಾಧನೆ ಮಾಡಿರುವುದಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯ ಹಲವು ಪಂದ್ಯಗಳಲ್ಲಿ ದಾಖಲೆಗಳನ್ನ ಮಾಡಿದ್ದಾರೆ.
Advertisement
It was a hope and a desire, that in my lifetime Ram Mandir consecration happens.
And what a moment, not only is the consecration happening on 22nd January, but have the great fortune and blessings to be able to attend India’s greatest moment in my lifetime.
Thank you for the… pic.twitter.com/Sq1bjEZUxE
— Venkatesh Prasad (@venkateshprasad) January 2, 2024
Advertisement
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು
Advertisement
ನನ್ನ ಜೀವಿತಾವಧಿಯಲ್ಲಿ ಶ್ರೀರಾಮಮಂದಿರದ ನಿರ್ಮಾಣವಾಗುವ ಭರವಸೆ ಮತ್ತು ಬಯಕೆ ಇತ್ತು. ಇದು ಎಂತಹ ಕ್ಷಣ. ಜನವರಿ 22ರಂದು ಶಂಕುಸ್ಥಾಪನೆ ಮಾತ್ರ ನಡೆಯುತ್ತಿಲ್ಲ. ಭಾರತದ ಶ್ರೇಷ್ಠ ಕ್ಷಣದಲ್ಲಿ ಪಾಲ್ಗೊಳ್ಳುವ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಜೀವಮಾನದಲ್ಲಿಯೂ ಮಾತ್ರವಲ್ಲದೇ ಭಾರತದ ಅತ್ಯಂತ ವಿಶೇಷ ಕ್ಷಣವಿದು. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀ ರಾಮ್ ಎಂದು ವೆಂಕಟೇಶ್ ಪ್ರಸಾದ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Advertisement
4000 ಸಂತರಿಗೆ ಆಹ್ವಾನ:
ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್‌ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?
ಪ್ರಾಣ ತ್ಯಾಗ ಮಾಡಿದ ಕುಟುಂಬಗಳಿಗೆ ಆಹ್ವಾನ:
ರಾಮ ಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮಭಕ್ತನ ಕುಟುಂಬದ ಸದಸ್ಯರು, ಕೈಗಾರಿಕಾ ಲೋಕದ ಮುಖ್ಯಸ್ಥರು, ತಿರುಪತಿ, ವೈಷ್ಣೋದೇವಿ, ಕಾಶಿ ವಿಶ್ವನಾಥ ದೇಗುಲ ಪ್ರಮುಖರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ. 25 ಆರ್‌ಎಸ್‌ಎಸ್ ಕಾರ್ಯಕರ್ತರು, 100 ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?
ಟಾಟಾ, ಅಂಬಾನಿ, ಅದಾನಿಗೂ ಆಹ್ವಾನ:
ಲಾರ್ಸೆನ್ ಟೂಬ್ರೊ ಮುಖ್ಯಸ್ಥರ ಜೊತೆ, ರತನ್ ಟಾಟಾ ಅವರ ಉತ್ತರಾಧಿಕಾರಿ ಚಂದ್ರಶೇಖರನ್, ಅಂಬಾನಿ ಮತ್ತು ಅದಾನಿಗೂ ಆಹ್ವಾನ.
ಸಿನಿಮಾ, ಕ್ರೀಡೆಯ ಗಣ್ಯರು
ತಮಿಳು ಚಲನಚಿತ್ರ ನಟ ರಜನಿಕಾಂತ್, ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್, ಗಾಯಕ ಗುರುದಾಸ್ ಮನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ ನಿತೀಶ್ ಭಾರದ್ವಾಜ್, ಚಲನಚಿತ್ರ ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿಯನ್ನು ಆಹ್ವಾನಿಸಿದ್ದಾರೆ.