ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಬಿಎಸ್‍ವೈ ಹೇಳಿಕೆಯನ್ನು ಬಳಸಿ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಸಿಎಂ ಸಿದ್ದರಾಮಯ್ಯನವರನ್ನು ಕಾಲೆಳೆದಿದ್ದಾರೆ.
ಒಬ್ಬ ನಾಯಕ ತಮ್ಮ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಬ್ಬರು ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಕಸರತ್ತು ನಡೆಸಿದ್ದಾರೆ. ಅದರಲ್ಲಿ ಒಂದು ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಪ್ರಯತ್ನ ನಡೆಸಿದ್ದಾರೆ. ಬಿಎಸ್‍ವೈ ಬಿಜೆಪಿ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ನಡುವೆ ಇರೋ ವ್ಯತ್ಯಾಸ ಇದೇ ಎಂದು ಮುರಳೀಧರ್ ರಾವ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.
Advertisement
ಕರ್ನಾಟಕ ಕಾಂಗ್ರೆಸ್ ನಲ್ಲಿ ತಂದೆಗೆ ಎರಡು ಕ್ಷೇತ್ರದ ಟಿಕೆಟ್, ಮಗನಿಗೆ ಒಂದು ಟಿಕೆಟ್ ಪಡೆದ ಇತಿಹಾಸವಿಲ್ಲ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿ ಟಿಕೆಟ್ ಪಡೆಯುವಲ್ಲಿ ಮತ್ತು ಮಗ ಯತೀಂದ್ರ ಅವರಿಗೆ ವರುಣಾದ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
One leader asked his son not to contest elections and other is himself fighting on two seats and one seat for his son. This is the difference between @BSYBJP and @Siddaramaiah ji’s Congress.
— P Muralidhar Rao (@PMuralidharRao) April 23, 2018